ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಳೆ (ಏ. 7) ಬಿಹಾರದ ಬೇಗುಸರಾಯ್ ನಲ್ಲಿ ನಡೆಯಲಿರುವ “ಪಲಾಯನ್ ರೋಕೋ, ನೌಕ್ರಿ ದೋ” ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಎಕ್ಸ್‌ನಲ್ಲಿ ಬಿಡುಗಡೆ ಮಾಡಲಾದ ವೀಡಿಯೊ ಸಂದೇಶದಲ್ಲಿ ‘ಬಿಹಾರದ ಯುವ ಸ್ನೇಹಿತರೇ, ನಾನು ಏಪ್ರಿಲ್ 7 ರಂದು ‘ಪಲಯನ್ ರೋಕೋ, ನೌಕ್ರಿ ದೋ’ ಮೆರವಣಿಗೆಯಲ್ಲಿ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯಲು ಬೇಗುಸರಾಯ್‌ಗೆ ಬರುತ್ತಿದ್ದೇನೆ. ನೀವು ಕೂಡ ಬಿಳಿ ಟೀ ಶರ್ಟ್ ಧರಿಸಿ ಬನ್ನಿ, ಪ್ರಶ್ನೆಗಳನ್ನು ಕೇಳಿ ಮತ್ತು ನಿಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ನಿರುದ್ಯೋಗದ ವಿರುದ್ಧ ಧ್ವನಿ ಎತ್ತಬೇಕು ಮತ್ತು ಎನ್‌ಡಿಎಯನ್ನು ಕಿತ್ತೊಗೆಯಬೇಕು ಎಂಬ ಧ್ಯೇಯದ ಮೂಲಕ ಈ ಆಂದೋಲನವನ್ನು ಮಾಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.