June 25, 2026
Thursday, June 25, 2026
spot_img

ಪಲ್ಯ, ಗ್ರೇವಿ & More 10 | ಈ ಮಶ್ರೂಮ್ ಕ್ಯಾಪ್ಸಿಕಂ ಪಲ್ಯ ತಿಂದ್ರೆ ಚಿಕನ್ ಮರೆತೇ ಬಿಡ್ತೀರ!

ರುಚಿಕರವಾಗಿರೋ ಸೈಡ್ ಡಿಷ್ ಬೇಕಾ? ಮಶ್ರೂಮ್ ಕ್ಯಾಪ್ಸಿಕಂ ಪಲ್ಯ ಸೂಪರ್ ಆಯ್ಕೆ. ಮಶ್ರೂಮ್‌ನ ಸಾಫ್ಟ್ ಟೆಕ್ಸ್ಚರ್ ಮತ್ತು ಕ್ಯಾಪ್ಸಿಕಂನ ಕ್ರಂಚಿ ರುಚಿ ಸೇರಿ ತುಂಬಾ ಟೇಸ್ಟಿ ಕಾಂಬಿನೇಶನ್ ಕೊಡುತ್ತೆ. ಚಪಾತಿ, ರೊಟ್ಟಿ, ಅನ್ನ ಎಲ್ಲಕ್ಕೂ ಚೆನ್ನಾಗಿ ಹೊಂದುತ್ತದೆ.

ಬೇಕಾಗುವ ಪದಾರ್ಥಗಳು

ಮಶ್ರೂಮ್ – 200 ಗ್ರಾಂ
ಕ್ಯಾಪ್ಸಿಕಂ – 1 ದೊಡ್ಡದು
ಈರುಳ್ಳಿ – 1
ಟೊಮೇಟೊ – 1 (ಐಚ್ಛಿಕ)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಅರಿಶಿನ – ¼ ಚಮಚ
ಮೆಣಸಿನ ಪುಡಿ – 1 ಚಮಚ
ಧನಿಯಾ ಪುಡಿ – 1 ಚಮಚ
ಗರಂ ಮಸಾಲಾ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ

ಒಂದು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಸ್ವಲ್ಪ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ ಹಾಕಿ ನಿಧಾನ ಉರಿಯಲ್ಲಿ ಹುರಿಯಿರಿ. ಟೊಮೇಟೊ ಬಳಸುತ್ತಿದ್ದರೆ ಈ ಹಂತದಲ್ಲಿ ಸೇರಿಸಿ ಮೃದುವಾಗುವವರೆಗೆ ಬೇಯಿಸಿ.

ಈಗ ಇದಕ್ಕೆ ಮಶ್ರೂಮ್ ಸೇರಿಸಿ ಮಧ್ಯಮ ಉರಿಯಲ್ಲಿ ಬೇಯಿಸಿ. ಮಶ್ರೂಮ್ ನೀರು ಬಿಡುತ್ತದೆ; ಆ ನೀರು ಒಣಗುವವರೆಗೆ ಮುಚ್ಚಿ ಬೇಯಿಸಿ. ನಂತರ ಕ್ಯಾಪ್ಸಿಕಂ ಹಾಕಿ 4–5 ನಿಮಿಷ ಮಾತ್ರ ಬೇಯಿಸಿ. ಹೆಚ್ಚು ಬೇಯಿಸಿದರೆ ಕ್ರಂಚಿ ಕಡಿಮೆಯಾಗುತ್ತದೆ. ಈಗ ಉಪ್ಪು ಹಾಕಿ ಜೊತೆಗೆ ಗರಂ ಮಸಾಲಾ ಹಾಕಿ 2 ನಿಮಿಷ ಫ್ರೈ ಮಾಡಿ. ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !