May 5, 2026
Tuesday, May 5, 2026
spot_img

ಪಲ್ಯ, ಗ್ರೇವಿ & More 16 | ಕಹಿ ಆದ್ರೂ ಆರೋಗ್ಯಕ್ಕೆ ಭಾರೀ ಒಳ್ಳೆದು ಈ ಹಾಗಲಕಾಯಿ ಪಲ್ಯ!

ಹಾಗಲಕಾಯಿ ಸ್ವಲ್ಪ ಕಹಿ ರುಚಿಯ ತರಕಾರಿ ಆದರೂ, ಸರಿಯಾಗಿ ತಯಾರಿಸಿದರೆ ತುಂಬಾ ರುಚಿಯಾಗಿರುತ್ತದೆ. ಊಟಕ್ಕೆ ಸೈಡ್ ಡಿಶ್ ಆಗಿ ಈ ಪಲ್ಯ ಮಾಡಬಹುದು.

ಬೇಕಾಗುವ ಸಾಮಗ್ರಿಗಳು:

ಹಾಗಲಕಾಯಿ – 2
ಈರುಳ್ಳಿ – 1
ಹಸಿರು ಮೆಣಸಿನಕಾಯಿ – 1
ಅರಿಶಿನ ಪುಡಿ – ¼ ಟೀ ಸ್ಪೂನ್
ಮೆಣಸಿನ ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬೆಲ್ಲ – 1 ಟೀ ಸ್ಪೂನ್ (ಐಚ್ಛಿಕ)
ತುರಿದ ತೆಂಗಿನಕಾಯಿ – 2 ಟೇಬಲ್ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಕರಿಬೇವು – ಸ್ವಲ್ಪ
ಎಣ್ಣೆ – 2 ಟೀ ಸ್ಪೂನ್

ತಯಾರಿಸುವ ವಿಧಾನ:

ಕತ್ತರಿಸಿದ ಹಾಗಲಕಾಯಿಗೆ ಸ್ವಲ್ಪ ಉಪ್ಪು ಹಾಕಿ 10 ನಿಮಿಷ ಇಡಿ. ನಂತರ ನೀರಿನಿಂದ ತೊಳೆಯಿರಿ (ಕಹಿ ಕಡಿಮೆಯಾಗುತ್ತದೆ).

ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನ ಬೇಳೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ. ಅದಕ್ಕೆ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ.

ಈಗ ಹಾಗಲಕಾಯಿ ತುಂಡುಗಳನ್ನು ಸೇರಿಸಿ, ಅರಿಶಿನ, ಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ. ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.

ಕೊನೆಯಲ್ಲಿ ಬೆಲ್ಲ ಮತ್ತು ತುರಿದ ತೆಂಗಿನಕಾಯಿ ಸೇರಿಸಿ ಕಲಸಿ 2 ನಿಮಿಷ ಹುರಿದರೆ ಸವಿಯಾದ ಹಾಗಲಕಾಯಿ ಪಲ್ಯ ಸಿದ್ಧ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !