February 10, 2026
Tuesday, February 10, 2026
spot_img

ಪಲ್ಯ, ಗ್ರೇವಿ & More 6 | ತಿಂದಷ್ಟು ಮತ್ತೂ ಬೇಕೆನಿಸುವ ಕಡಲೆಬೇಳೆ ಸೊಪ್ಪಿನ ಪಲ್ಯ!

ಹಸಿರು, ತಾಜಾ ಸೊಪ್ಪು ಹಾಗೂ ಪ್ರೋಟೀನ್‌ಭರಿತ ಕಡಲೆಬೇಳೆ ಈ ಎರಡು ಮಿಕ್ಸ್ ಆದ್ರೆ ರೆಡಿ ಆಗೋದೇ ಸ್ಪೆಷಲ್ ಕಡಲೆಬೇಳೆ ಸೊಪ್ಪಿನ ಪಲ್ಯ. ಬಿಸಿಬಿಸಿ ಅನ್ನ, ರೋಟಿ ಅಥವಾ ಚಪಾತಿಯ ಜೊತೆಗೆ ತಿನ್ನಲು ಸರಿಯಾದ ಹಳ್ಳಿ ಶೈಲಿಯ ಡಿಶ್.

ಬೇಕಾಗುವ ಪದಾರ್ಥಗಳು:

ಕಡಲೆಬೇಳೆ – ½ ಕಪ್
ಹಸಿರು ಸೊಪ್ಪು – 2 ಕಪ್ (ಸಣ್ಣಗೆ ಕತ್ತರಿಸಿದ್ದು, ಹುರುಳಿಕಾಯಿ, ಬೀನ್ಸ್, ಬಟಾಣಿ ಹಾಕಬಹುದು)
ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ್ದು)
ಹಸಿ ಮೆಣಸಿನಕಾಯಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೇಬಲ್ ಸ್ಪೂನ್

ಒಗ್ಗರಣೆ:
ಸಾಸಿವೆ – ½ ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಮೊದಲು ಕಡಲೆಬೇಳೆಯನ್ನು ಬೇಯಿಸಿಟ್ಟುಕೊಳ್ಳಿ. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಉದ್ದಿನ ಬೇಳೆ ಹಾಕಿ ಹುರಿಯಿರಿ. ಇದಕ್ಕೆ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹುರಿಯಿರಿ.
ಈಗ ಬೇಯಿಸಿದ ಕಡಲೆಬೇಳೆ ಮತ್ತು ಕತ್ತರಿಸಿದ ಸೊಪ್ಪು ಸೇರಿಸಿ, ಉಪ್ಪು ಹಾಕಿ 5–7 ನಿಮಿಷ ಚೆನ್ನಾಗಿ ಹುರಿಯಿರಿ.
ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.

ಇದನ್ನೂ ಓದಿ:

ಬಿಸಿ ಬಿಸಿ ಕಡಲೆಬೇಳೆ ಸೊಪ್ಪಿನ ಪಲ್ಯವನ್ನು ನಿಮ್ಮ ಬಿಸಿಬಿಸಿ ಅನ್ನ ಅಥವಾ ರೋಟಿಯ ಜೊತೆ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !