May 25, 2026
Monday, May 25, 2026
spot_img

ಪಲ್ಯ, ಗ್ರೇವಿ & More 79 | ಬಿಸಿ ಅನ್ನಕ್ಕೂ, ಚಪಾತಿಗೂ ಸೂಪರ್: ರಾಜಸ್ಥಾನಿ ಸ್ಟೈಲ್ ಈರುಳ್ಳಿ ಕಡಿ

ಬೇಗನೆ ತಯಾರಾಗುವ, ಹುಳಿ-ಖಾರದ ರುಚಿಯಿಂದ ನಾಲಿಗೆಗೆ ಮಜಾ ಕೊಡುವ ಖಾದ್ಯ ಎಂದರೆ ಈರುಳ್ಳಿ ಕಡಿ. ಹುಳಿ ಮೊಸರು, ಕಡಲೆಹಿಟ್ಟು ಮತ್ತು ಈರುಳ್ಳಿಯ ಕಾಂಬಿನೇಷನ್‌ನಿಂದ ಮಾಡುವ ಈ ರಾಜಸ್ಥಾನಿ ಶೈಲಿಯ ಕಡಿ ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಪರ್ಫೆಕ್ಟ್. ಕಡಿಮೆ ಎಣ್ಣೆಯಲ್ಲಿ ತಯಾರಾಗುವುದರಿಂದ ಆರೋಗ್ಯಕರವೂ ಹೌದು.

ಬೇಕಾಗುವ ಪದಾರ್ಥಗಳು:

ಹುಳಿ ಮೊಸರು – 1 ಕಪ್
ಕಡಲೆಹಿಟ್ಟು – 2 ರಿಂದ 3 ಚಮಚ
ಈರುಳ್ಳಿ – 2
ಹಸಿಮೆಣಸಿನಕಾಯಿ – 2
ಶುಂಠಿ – 1 ಚಿಕ್ಕ ತುಂಡು
ಸಾಸಿವೆ – 1/2 ಚಮಚ
ಜೀರಿಗೆ – 1/2 ಚಮಚ
ಇಂಗು – ಒಂದು ಚಿಟಿಕೆ
ಅರಿಶಿನ – 1/4 ಚಮಚ
ಖಾರದ ಪುಡಿ – 1/2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ – 1 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ನೀರು – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು ಒಂದು ಬೌಲ್‌ಗೆ ಹುಳಿ ಮೊಸರು ಮತ್ತು ಕಡಲೆಹಿಟ್ಟು ಹಾಕಿ ಚೆನ್ನಾಗಿ ಕಲಸಿ. ಉಂಡೆಗಳಿಲ್ಲದಂತೆ ನುಣ್ಣಗೆ ಮಿಶ್ರಣ ಮಾಡಿ, ಸ್ವಲ್ಪ ನೀರು ಸೇರಿಸಿ ತೆಳುವಾಗಿಸಿಕೊಳ್ಳಿ.

ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಇಂಗು ಹಾಕಿ ಒಗ್ಗರಣೆ ಕೊಡಿ. ನಂತರ ಹಸಿಮೆಣಸಿನಕಾಯಿ, ಶುಂಠಿ ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ. ಈರುಳ್ಳಿ ಗೋಲ್ಡನ್ ಬಣ್ಣ ಬಂದ ಮೇಲೆ ಅರಿಶಿನ, ಖಾರದ ಪುಡಿ ಸೇರಿಸಿ ಕಲಸಿ.

ಇದಕ್ಕೆ ಮೊಸರು-ಕಡಲೆಹಿಟ್ಟಿನ ಮಿಶ್ರಣ ಹಾಕಿ, ಉಪ್ಪು ಸೇರಿಸಿ ನಿಧಾನ ಉರಿಯಲ್ಲಿ 10 ನಿಮಿಷ ಕುದಿಸಿ. ಮಧ್ಯೆ ಮಧ್ಯೆ ಕಲಸುತ್ತಿರಿ.

ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿದರೆ ಸುವಾಸನೆಯ ಈರುಳ್ಳಿ ಕಡಿ ಸವಿಯಲು ಸಿದ್ಧ. ಬಿಸಿ ಅನ್ನ ಅಥವಾ ಚಪಾತಿಯ ಜೊತೆ ತಿಂದರೆ ರುಚಿ ಡಬಲ್!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !