September 10, 2026
Thursday, September 10, 2026
spot_img

ಪಲ್ಯ, ಗ್ರೇವಿ & More 93 | ಮೆಂತೆ ಸೊಪ್ಪಿನ ಜೊತೆ ಮೊಟ್ಟೆ ಸೇರಿಸಿದ್ರೆ ರೆಡಿ ಆಗುತ್ತೆ ಅದ್ಭುತ ಪಲ್ಯ

ಮೆಂತ್ಯ ಸೊಪ್ಪು ಮತ್ತು ಮೊಟ್ಟೆಯ ಈ ಪಲ್ಯ ಆರೋಗ್ಯಕ್ಕೂ, ರುಚಿಗೂ ಸೂಪರ್ ಕಾಂಬಿನೇಷನ್. ಸ್ವಲ್ಪ ಕಹಿ ಮೆಂತ್ಯ ಸೊಪ್ಪು ಮೊಟ್ಟೆಯ ಜೊತೆ ಸೇರಿದಾಗ ಅದ್ಭುತವಾದ ರುಚಿ ಬರುತ್ತದೆ. ಇದು ಚಪಾತಿ, ರೊಟ್ಟಿ ಮತ್ತು ಅನ್ನಕ್ಕೆ ಪರ್ಫೆಕ್ಟ್.

ಬೇಕಾಗುವ ಸಾಮಗ್ರಿಗಳು

ಮೊಟ್ಟೆ – 3 ರಿಂದ 4
ಮೆಂತ್ಯ ಸೊಪ್ಪು – 1 ಕಟ್ಟು
ಈರುಳ್ಳಿ – 2
ಹಸಿರು ಮೆಣಸಿನಕಾಯಿ – 2 ರಿಂದ 3
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಅರಿಶಿನ ಪುಡಿ – 1/4 ಚಮಚ
ಖಾರದ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ರಿಂದ 3 ಚಮಚ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ

ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ ಹಾಕಿ ಸಿಡಿದ ಮೇಲೆ ಹೆಚ್ಚಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಸ್ವಲ್ಪ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ.

ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ತೊಳೆದು ಹೆಚ್ಚಿದ ಮೆಂತ್ಯ ಸೊಪ್ಪು ಸೇರಿಸಿ 2–3 ನಿಮಿಷ ಬಾಡಿಸಿಕೊಳ್ಳಿ.

ಇದಕ್ಕೆ ಅರಿಶಿನ ಪುಡಿ, ಖಾರದ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮೊಟ್ಟೆಗಳನ್ನು ಒಡೆದು ಸೇರಿಸಿ, ಕಡಿಮೆ ಉರಿಯಲ್ಲಿ ಚೆನ್ನಾಗಿ ಕೈಯಾಡಿಸುತ್ತಾ scrambled ಆಗುವವರೆಗೆ ಬೇಯಿಸಿ.

ಮೊಟ್ಟೆ ಪೂರ್ತಿಯಾಗಿ ಬೇಯಿದ ನಂತರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !