ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣಪತಿಗೆ ಎಷ್ಟು ವಿಧದಲ್ಲಿ ನೈವೇದ್ಯ ಅರ್ಪಿಸಿದರೂ ಕಡಿಮೆಯೇ. ರುಚಿ ರುಚಿಯಾದ ಹೆಸರು ಬೇಳೆ ಪಂಚಕಜ್ಜಾಯ ಈ ರೀತಿ ಮಾಡಿ ಅರ್ಪಿಸಿ.
ಬೇಕಾಗುವ ಸಾಮಾಗ್ರಿ: ಹೆಸರು ಬೇಳೆ ಅರ್ಧ ಕೆಜಿ, ಬೆಲ್ಲ ಅರ್ಧ ಕೆಜಿ, ಗೋಡಂಬಿ ಸ್ವಲ್ಪ, ಕಪ್ಪು ಎಳ್ಳು ನಾಲ್ಕು ಟೀ ಸ್ಪೂನ್, ತೆಂಗಿನ ಕಾಯಿ ಒಂದು.
ಮಾಡುವ ವಿಧಾನ:
ತೆಂಗಿನಕಾಯಿಯನ್ನು ಒಡೆದು, ತುರಿದಿಟ್ಟುಕೊಳ್ಳಿ. ಬೆಲ್ಲವನ್ನು ಸೇರಿಸಿ ಸರಿಯಾಗಿ ಮಿಶ್ರಣಮಾಡಿ. ಗೋಡಂಬಿ ಫ್ರೈಮಾಡಿ ಸೇರಿಸಿ. ಕಪ್ಪು ಎಳ್ಳನ್ನು ಬಾಣಲೆಯಲ್ಲಿ ಹುರಿದು ಮಿಶ್ರಣ ಮಾಡಿ. ಒಂದು ಬಾಣಲೆಯಲ್ಲಿ ಹೆಸರು ಕಾಳನ್ನು ಸಣ್ಣ ಉರಿಯಲ್ಲಿ ಫ್ರೈಮಾಡಿ. ಅದು ಪರಿಮಳ ಸೂಸುತ್ತಿದ್ದಂತೆಯೇ ಒಲೆಯಿಂದ ಕೆಳಗಿಳಿಸಿ ಪ್ರತ್ಯೇಕ ಪಾತ್ರೆಗೆ ವರ್ಗಾಯಿಸಿ. ತಣ್ಣಗಾಗುತ್ತಿದ್ದಂತೆಯೇ ಮಿಕ್ಸಿ ಜಾರಿಗೆ ಹಾಕಿ ಹುಡಿಮಾಡಿ. ಪೂರ್ಣ ನಯ ಹುಡಿಯಾಗದಂತೆ ಜಾಗ್ರತೆ ವಹಿಸಿ. ಈ ಹುಡಿಯನ್ನು ಮಿಶ್ರಮಾಡಿ ಕಾಯಿ ಬೆಲ್ಲ ಮಿಶ್ರಣಕ್ಕೆ ಸೇರಿಸಿ ಸರಿಯಾಗಿ ಕಲೆಸಿಕೊಳ್ಳಿ. ರುಚಿ ರುಚಿಯಾದ ಪಂಚಕಜ್ಜಾಯ ಸಿದ್ಧವಾಯಿತು. ಗಣಪತಿಗೆ ನೈವೇದ್ಯಮಾಡಿ ಸ್ವೀಕರಿಸಿ.