ಅಮೆರಿಕದ ಯುದ್ಧ ವಿಮಾನ F-35 ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣ ಕೆರೊಲಿನಾದಲ್ಲಿ ಅಮೆರಿಕದ ಯುದ್ಧ ವಿಮಾನ F-35 ನಾಪತ್ತೆಯಾಗಿದೆ. ವಿಮಾನವನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಅಮೆರಿಕದ ಮಿಲಿಟರಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಬದಲಾದ ಹವಾಮಾನವಿದ್ದ ಕಾರಣ, ವಿಮಾನ ಅಪಘಾತಕ್ಕೀಡಾಗಿತ್ತು, ಪೈಲಟ್ ವಿಮಾನದಿಂದ ಹಾರುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚಾರ್ಲ್ಸ್​​ಟನ್ ನಗರದ ಉತ್ತರಕ್ಕೆ ಎರಡು ಸರೋವರಗಳ ಸುತ್ತಲೂ ಯುದ್ಧ ವಿಮಾನಕ್ಕೆ ಹುಡುಕಾಟ ನಡೆಸಲಾಗುತ್ತಿದೆ. ಪೈಲಟ್ ಸುರಕ್ಷಿತವಾಗಿ ಜಾಯಿಂಟ್​ ಬೇಸ್​ಗೆ ಮರಳಿದ್ದಾರೆ ಆದರೆ ವಿಮಾನ ಎಲ್ಲಿದೆ ಎಂಬುದೇ ತಿಳಿಯದಂತಾಗಿದೆ ಎಂದು ಮೇಜರ್ ಸಲಿನಾಸ್ ಹೇಳಿದ್ದಾರೆ.

ಎಎಫ್​ಪಿ ವರದಿಯ ಪ್ರಕಾರ, ಲಾಕ್​ಹೀಡ್​ ಮಾರ್ಟಿನ್ ತಯಾರಿಸಿದ ಪ್ರತಿ ವಿಮಾನಗಳಿಗೆ 80 ಮಿಲಿಯನ್ ಡಾಲರ್​ ವೆಚ್ಚವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!