ಸ್ಕಾಟ್ ಲ್ಯಾಂಡ್ ನಲ್ಲಿ ವೈದ್ಯ ಎಂದು ಮಹಿಳೆಗೆ ಪಂಗನಾಮ

ಹೊಸದಿಗಂತ ವರದಿ, ಉಡುಪಿ:

ತಾನು ಸ್ಕಾಟ್ ಲ್ಯಾಂಡ್ ನಲ್ಲಿ ವೈದ್ಯ ಎಂದು ಮಹಿಳೆಯೊಬ್ಬರಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡು, ತಾನು ಗಿಫ್ಟ್ ಕಳುಹಿಸಿದಾಗಿ ನಂಬಿಸಿ, ಮಹಿಳೆಯಿಂದ
ಒಟ್ಟು ರೂ. 6,91,000 ರೂ.ಗಳನ್ನು ಲಪಟಾಯಿಸಿದ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ಹಿನ್ನಲೆ

2022 ರ ಸೆಪ್ಟೆಂಬರ್ ತಿಂಗಳಿನಲ್ಲಿ ಇನ್ಸ್ ಸ್ಟಾಗ್ರಾಮ್ ಮೂಲಕ ಲಿಯೋ ನಾರ್ಡ್ ಹ್ಯಾಂಕ್ಸ್ ಎಂಬ ಹೆಸರಿನ ಖಾತೆಯನ್ನು ಹೊಂದಿರುವ ವ್ಯಕ್ತಿಯೂ ಮಹಿಳಗೆ ತಾನು ವೈದ್ಯ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ಸ್ನೇಹ ಬೆಳೆದು ವ್ಯಾಟ್ಸಾಪ್ ನಲ್ಲಿ ಚಾಟಿಂಗ್ ಆರಂಭಿಸಿದ್ದಾರೆ.

ನವೆಂಬರ್ ತಿಂಗಳ ಮೊದಲ ವಾರದಲ್ಲಿ ಮಹಿಳೆಗೆ ಗಿಫ್ಟ್ ಕಳುಹಿಸುವುದಾಗಿ ನಂಬಿಸಿದ್ದನು. ಅದರಂತೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೊರಿಯರ್‌ ಕಚೇರಿಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ಸ್ಕಾಟ್ ಲ್ಯಾಂಡ್ ನಿಂದ ಬಂದಿರುವ ಪಾರ್ಸೆಲ್ ಗೆ ಪಾರ್ಸೆಲ್ ಚಾರ್ಜ್‌, ಇನ್‌ಕಮ್‌ ಟ್ಯಾಕ್ಸ್, ಪೌಂಡ್‌ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಹಣ ಪಾವತಿಸಬೇಕು ಎಂದು ತಿಳಿಸಿದ್ದಾರೆ.

ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಮಹಿಳೆ ಹಂತ ಹಂತವಾಗಿ ಒಟ್ಟು ರೂ. 6,91,000 ಹಣವನ್ನು ಪಾವತಿಸಿದ್ದಾರೆ. ಆರೋಪಿಗಳು ಡಾಕ್ಟರ್ ಎಂದು, ಗಿಫ್ಟ್ ಪಾರ್ಸೆಲ್ ಕಳಿಸುವುದಾಗಿ ನಂಬಿಸಿ ಹಣವನ್ನು ಪಡೆದು, ಪಾರ್ಸೆಲ್ ಕಳುಹಿಸದೇ, ಕಳುಹಿಸಿದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿದ್ದಾರೆ ಎಂದು ನೊಂದ ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!