ಪಾನಿಪೂರಿ ಮನೆಯಲ್ಲೇ ಮಾಡುವುದು ಎಷ್ಟೊಂದು ಸುಲಭ ಗೊತ್ತಾ..? ಇಲ್ಲಿದೆ ನೋಡಿ ರೆಸಿಪಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ನಿಮ್ಮ ಅಚ್ಚುಮೆಚ್ಚಿನ ಫುಡ್‌ ಯಾವುದು ಎಂದು ಎಂದು ಪ್ರಶ್ನಿಸಿದರೆ ಬಹುತೇಕರ ಉತ್ತರ ಪಾನಿಪೂರಿ ಎಂದಾಗಿರುತ್ತದೆ. ರಸ್ತೆ ಬದಿಯ ಚಾಟ್ ಅಂಗಡಿಗಳಲ್ಲಿ ಪಾನಿಪುರಿ ತಿನ್ನುವ ಗಮ್ಮತ್ತನ್ನು ಯಾರು ಮರೆಯುತ್ತಾರೆ ಹೇಳಿ?. ಪಾನಿಪೂರಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಆ ರೆಸಿಪಿ ಇಲ್ಲಿದೆ ನೋಡಿ…

ಪಾನಿ ಪುರಿಗಾಗಿ ಪೂರಿ ತಯಾರಿ ಬಗೆ ಹೀಗೆ…
ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 1 ಕಪ್ ರವೆ ಮತ್ತು 2 ಟೀಸ್ಪೂನ್ ಮೈದಾಹಿಟ್ಟು ತೆಗೆದುಕೊಳ್ಳಿ. 3 tbsp ಎಣ್ಣೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಆ ಬಳಿಕ ¼ ಕಪ್ ಬಿಸಿ ನೀರನ್ನು ಸೇರಿಸಿ ಮತ್ತು ಕೈಯ್ಯಿಂದ ತಟ್ಟಿ ಹದವಾಗಿಸಿಕೊಳ್ಳಿ. 5 ರಿಂದ 8 ನಿಮಿಷಗಳ ಕಾಲ ಅಥವಾ ಹಿಟ್ಟು ರೂಪುಗೊಳ್ಳುವವರೆಗೆ ಹೀಗೆ ಬೆರೆಸಿಕೊಳ್ಳಿ. ಅಗತ್ಯವಿದ್ದರೆ ನೀರನ್ನು ಸಿಂಪಡಿಸಿ ಹಿಟ್ಟು ನಯವಾಗುವಂತೆ ಮಾಡಿ. ಹಿಟ್ಟು ಮೃದುವಾದ ಬಳಿಕ 20 ನಿಮಿಷಗಳ ಕಾಲ ಪಾತ್ರೆಯಲ್ಲಿ ಮುಚ್ಚಿಡಿ. 20 ನಿಮಿಷಗಳ ನಂತರ, ಮತ್ತೆ 2 ನಿಮಿಷಗಳ ಕಾಲ ಹದವಾಗಿಸಿ. ಬಳಿಕ ಹಿಟ್ಟನ್ನು ಹಿಸುಕಿ ಚಿಕ್ಕ ಚೆಂಡಿನ ಗಾತ್ರಕ್ಕೆ ತನ್ನಿ. ಆ ನಂತರ ಬಿಸಿ ಎಣ್ಣೆಯ ಮೇಲಿಟ್ಟು ಡೀಪ್ ಫ್ರೈ ಮಾಡಿ, ಪುರಿ ಉಬ್ಬಿದ ಬಳಿಕ ತಿರುಗಿಸಿ. ಮಧ್ಯಮ ಉರಿಯಲ್ಲಿ ಅದು ಗೋಲ್ಡನ್ ಬ್ರೌನ್ ಆಗುವವರೆಗೆ ಮತ್ತು ಎರಡೂ ಬದಿಯಲ್ಲಿ ಗರಿಗರಿಯಾಗುವವರೆಗೆ ಫ್ರೈ ಮಾಡಿ. ಅಲ್ಲಿಗೆ ಪಾನಿ ಪುರಿಗೆ ಪುರಿ ಸಿದ್ಧವಾದಂತೆ. ಅದು ಸಂಪೂರ್ಣವಾಗಿ ತಣ್ಣಗಾದ ನಂತರ, ನೀವು ಗಾಳಿಯಾಡದ ಬಾಕ್ಸ್‌ ನಲ್ಲಿ ಸಂಗ್ರಹಿಸಬಹುದು ಮತ್ತು ಅದನ್ನು ಒಂದು ವಾರದವರೆಗೆ ಬಳಸಬಹುದು.

ಪಾನಿ ತಯಾರಿಕೆ ವಿಧಾನ ಹೀಗೆ ಮಾಡಿ:
ಮೊದಲನೆಯದಾಗಿ, ಸಣ್ಣ ಬ್ಲೆಂಡರ್‌ನಲ್ಲಿ ¼ ಕಪ್ ಪುದೀನ, ½ ಕಪ್ ಕೊತ್ತಂಬರಿ, 1 ಇಂಚಿನ ಶುಂಠಿ, 2 ಮೆಣಸಿನಕಾಯಿ ಮತ್ತು ಸಣ್ಣ ಚೆಂಡು ಗಾತ್ರದ ಹುಣಸೆಹಣ್ಣು ತೆಗೆದುಕೊಳ್ಳಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ ನಯವಾದ ಪೇಸ್ಟ್‌ನಂತೆ ಮಿಶ್ರಣ ಮಾಡಿ.
ಪಾನಿ ಪುರಿ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. 1 ಟೀಸ್ಪೂನ್ ಚಾಟ್ ಮಸಾಲಾ, 1 ಟೀಸ್ಪೂನ್ ಜೀರಿಗೆ ಪುಡಿ, ಪಿಂಚ್ ಹಿಂಗ್, ¾ ಟೀಸ್ಪೂನ್ ಉಪ್ಪು ಮತ್ತು 4 ಕಪ್ ತಣ್ಣೀರು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಅಲ್ಲಿಗೆ ಪಾನಿ ಗೋಲ್ಗಪ್ಪಾದೊಂದಿಗೆ ಆನಂದಿಸಲು ಸಿದ್ಧವಾದಂತೆ!.

ಆಲೂ ಪಲ್ಯ ತಯಾರಿ:
ಮೊದಲನೆಯದಾಗಿ, 2.ಆಲೂಗಡ್ಡೆಯನ್ನು ಬೇಯಿಸಿ, ಕೈಗಳಿಂದ ಹಿಸುಕಿ ಮೆತ್ತಗೆ ಹಿಟ್ಟಿನಂತೆ ಮಾಡಿಕೊಳ್ಳಿ. ಆಲೂಗೆಡ್ಡೆಯನ್ನು  ಬೇಯಿಸಿ ಕೈತ್ಯಿಂದ ಹಿಚುಕಿ ಹದವಾಗಿಸಿಕೊಳ್ಳಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನ ಪುಡಿ, ಪುಡಿಮಾಡಿದ ಕಾಳುಮೆಣಸು, ಉಪ್ಪು, ಹುಳಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಕಲಸಿ ಮಿಶ್ರ ಮಾಡಿ. ಪುರಿಯನ್ನು ಕೈಯ್ಯಿಂದ ಒತ್ತಿ ಮಧ್ಯದಲ್ಲಿ ಸಣ್ಣ ರಂಧ್ರವನ್ನು ಮಾಡಿಕೊಳ್ಳಿ. ಪೂರಿಯ ಅರ್ಧಭಾಗದವರೆಗೆ ಪಲ್ಯವನ್ನು ತುಂಬಿ, ನಂತರ ಉಳಿದರ್ಧಕ್ಕೆ ಪಾನಿಯನ್ನು ತುಂಬಿ ಇಡೀ ಪೂರಿಯನ್ನು ಹಾಗೇ ಬಾಯಲ್ಲಿಟ್ಟು ಆನಂದಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!