ಚುನಾವಣೆ ಆಯೋಗದ ‘ಐಕಾನ್’ ಸ್ಥಾನದಿಂದ ಕೆಳಗಿಳಿದ ಪಂಕಜ್‌ ತ್ರಿಪಾಠಿ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಮಿರ್ಜಾಪುರ ವೆಬ್‌ ಸಿರೀಸ್‌ ಖ್ಯಾತಿ ಬಾಲಿವುಡ್‌ ನಟ ಪಂಕಜ್‌ ತ್ರಿಪಾಠಿ ಅವರು ಚುನಾವಣೆ ಆಯೋಗದ ‘ರಾಷ್ಟ್ರೀಯ ಐಕಾನ್‌’ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸ್ವಯಂ ಪ್ರೇರಿತರಾಗಿಯೇ ಪಂಕಜ್‌ ತ್ರಿಪಾಠಿ ಅವರು ರಾಷ್ಟ್ರೀಯ ಐಕಾನ್‌ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಚುನಾವಣೆ ಆಯೋಗವು ಸ್ಪಷ್ಟಪಡಿಸಿದೆ.

“ಪಂಕಜ್‌ ತ್ರಿಪಾಠಿ ಅವರು ಚುನಾವಣೆ ಆಯೋಗದ ರಾಷ್ಟ್ರೀಯ ಐಕಾನ್‌ ಸ್ಥಾನದಿಂದ ಕೆಳಗಿಳಿದಿದ್ದಾರೆ. ಪಂಕಜ್‌ ತ್ರಿಪಾಠಿ ಅವರು ಮುಂಬರುವ ಸಿನಿಮಾದಲ್ಲಿ ರಾಜಕೀಯ ನಾಯಕನ ಪಾತ್ರ ನಿಭಾಯಿಸುತ್ತಿರುವ ಕಾರಣ ಸ್ವಯಂಪ್ರೇರಿತರಾಗಿ ಅವರು ಸ್ಥಾನದಿಂದ ಕೆಳಗಿಳಿದಿದ್ದಾರೆ. ಪಂಕಜ್‌ ತ್ರಿಪಾಠಿ ಅವರು ಇದುವರೆಗೆ ಮೂಡಿಸಿದ ಜಾಗೃತಿಯನ್ನು ಆಯೋಗವು ಸ್ಮರಿಸುತ್ತದೆ” ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಚುನಾವಣೆ ಆಯೋಗ ಪೋಸ್ಟ್‌ ಮಾಡಿದೆ.

ಪಂಕಜ್‌ ತ್ರಿಪಾಠಿ ಅವರು 2022ರ ಅಕ್ಟೋಬರ್‌ನಲ್ಲಿ ಚುನಾವಣೆ ಆಯೋಗದ ರಾಷ್ಟ್ರೀಯ ಐಕಾನ್‌ ಎಂದು ಘೋಷಿಸಲಾಗಿತ್ತು. ಸದ್ಯ, ಪಂಕಜ್‌ ತ್ರಿಪಾಠಿ ಅವರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ‘ಮೈ ಹೂಂ ಅಟಲ್’‌ ಸಿನಿಮಾದಲ್ಲಿ ವಾಜಪೇಯಿ ಅವರ ಪಾತ್ರ ನಿರ್ವಹಿಸಿದ್ದಾರೆ.

ಮೈ ಹೂಂ ಅಟಲ್‌ ಸಿನಿಮಾವು ಜನವರಿ 19ರಂದು ಬಿಡುಗಡೆಯಾಗಲಿದೆ. ಇದೇ ಕಾರಣದಿಂದಾಗಿ ಚುನಾವಣೆ ಆಯೋಗದ ಐಕಾನ್‌ ಸ್ಥಾನದಿಂದ ಪಂಕಜ್‌ ತ್ರಿಪಾಠಿ ಅವರು ಕೆಳಗಿಳಿದಿದ್ದಾರೆ ಎನ್ನಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!