ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಪ್ಪಾಯ ಹಣ್ಣು ಆರೋಗ್ಯಕ್ಕೆ ಅತ್ಯುತ್ತಮವಾದದ್ದು. ಪಪ್ಪಾಯ ಸೇವನೆಯಿಂದ ಅನೇಕ ಖಾಯಿಲೆ ದೂರವಾಗುತ್ತದೆ. ದೇಹಕ್ಕೆ ಬೇಕಾದ ಅನೇಕ ಪೌಷ್ಠಿಕಾಂಶಗಳು ಈ ಪಪ್ಪಾಯ ಹಣ್ಣಿನಲ್ಲಿವೆ. ಪಪ್ಪಾಯ ಬಳಸಿ ತುಪ್ಪದಲ್ಲಿ ಮಾಡಿದ ಹಲ್ವಾ ಅದೇನ್ ರುಚಿ ಗೊತ್ತಾ. ನೀವೂ ಒಮ್ಮೆ ಟ್ರೈಮಾಡಿ ನೋಡಿ.
ಬೇಕಾಗುವ ಸಾಮಾಗ್ರಿ: ಒಂದು ದೊಡ್ಡ ಹಣ್ಣಾದ ಪಪ್ಪಾಯಿ, ತುಪ್ಪ ಅರ್ಧ ಕಪ್, ಯಾಲಕ್ಕಿ ಪುಡಿ ಸ್ವಲ್ಪ, ಸಕ್ಕರೆ ಎರಡೂವರೆ ಕಪ್, ದ್ರಾಕ್ಷಿ, ಗೋಡಂಬಿ ಅಲಂಕಾರಕ್ಕೆ.
ಮಾಡುವ ವಿಧಾನ: ಪಪ್ಪಾಯಿ ಹಣ್ಣನ್ನು ಸಿಪ್ಪೆ ತೆಗೆದು, ಬೀಜ ಪ್ರತ್ಯೇಕಿಸಿ ಸಣ್ಣದಾಗಿ ಹೆಚ್ಚಿ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಅರೆಯಿರಿ. ಒಲೆಯಲ್ಲಿ ಬಾಣಲೆಯಿಟ್ಟು ತುಪ್ಪ ಬಿಸಿಮಾಡಿ. ಬಿಸಿಯಾದ ತುಪ್ಪಕ್ಕೆ ಮಿಕ್ಸಿ ಜಾರಿನಲ್ಲಿರುವ ಪಪ್ಪಾಯಿ ಮಿಕ್ಸ್ ಹಾಕಿ, ಸರಿಯಾಗಿ ಬೇಯುತ್ತಿದ್ದಂತೆಯೇ ಸಕ್ಕರೆ ಹಾಕಿ ಕೈಯಾಡಿಸಿ. ಸ್ವಲ್ಪ ತುಪ್ಪ ಸೇರಿಸಿ ಮತ್ತಷ್ಟು ಬೇಯಲು ಬಿಡಿ. ಬೆಂದು ಗಟ್ಟಿಯಾಗುತ್ತಿದ್ದಂತೆಯೇ ಯೇಲಕ್ಕಿ ಪುಡಿ ಹಾಕಿ ಸರಿಯಾಗಿ ಮಿಶ್ರಮಾಡಿ. ಗೋಡಂಬಿ , ದ್ರಾಕ್ಷಿ ಸೇರಿಸಿ ಮಿಶ್ರಮಾಡಿ ತುಪ್ಪ ಸವರಿದ ಟ್ರೇಗೆ ವರ್ಗಾಯಿಸಿ. ಬಿಸಿಯಾರುತ್ತಿದ್ದಂತೆಯೇ ಬೇಕಾದ ಆಕಾರಕ್ಕೆ ಕತ್ತರಿಸಿ, ಮೇಲ್ಭಾಗದಲ್ಲಿ ಗೋಡಂಬಿ, ದ್ರಾಕ್ಷಿಯಿಂದ ಅಲಂಕಾರ ಮಾಡಿ. ರುಚಿ ರುಚಿಯಾದ ಪಪ್ಪಾಯ ಹಲ್ವ ರೆಡಿ!