ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಜುಡೊ ಸ್ಪರ್ಧಿ ಕಪಿಲ್ ಪರ್ಮಾರ್, ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದಾರೆ.
ಪುರುಷರ 60 ಕೆ.ಜಿ. ಜೆ1 ಜುಡೊ ಸ್ಪರ್ಧೆಯಲ್ಲಿ ಕಪಿಲ್, ಬ್ರೆಜಿಲ್‌ನ ಎಲಿಯೆಲ್ಟನ್ ಡಿ ಒಲಿವೇರಾ ಅವರನ್ನು ಮಣಿಸಿ ಐತಿಹಾಸಿಕ ಸಾಧನೆ ಮಾಡಿದರು.
ಪ್ಯಾರಾಲಿಂಪಿಕ್ಸ್ ಜುಡೊ ಕ್ರೀಡೆಯ ಇತಿಹಾಸದಲ್ಲೇ ಭಾರತ ಗೆದ್ದ ಮೊದಲ ಪದಕ ಇದಾಗಿದೆ.
ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದ ಕಪಿಲ್, 10-0 ಅಂತರದಲ್ಲಿ ಪಂದ್ಯ ವಶಪಡಿಸಿಕೊಂಡರು.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 25 ಪದಕಗಳನ್ನು ಗೆದ್ದಿದೆ. ಇದು ಕೂಟವೊಂದರಲ್ಲಿ ಭಾರತದ ಸರ್ವಶ್ರೇಷ್ಠ ಸಾಧನೆಯಾಗಿದೆ.