ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವತಿ ಮೇಲೆ ದೌರ್ಜನ್ಯ ಪ್ರಕರಣ ವಿಚಾರವಾಗಿ ನೀಡಿದ್ದ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಲ್ಲ, ತಪ್ಪಾಗಿ ಬಿಂಬಿಸಲಾಗಿದೆ ಎಂದು ಕರ್ನಾಟಕ ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಮಹಿಳೆಯರ ರಕ್ಷಣೆ ಪರ ಇರುವವನು. ನಾನು ಗೃಹಸಚಿವನಾದಾಗ ನಿರ್ಭಯ ಯೋಜನೆ ಅನುಷ್ಠಾನ ಮಾಡಿದ್ದೇನೆ. ಮಹಿಳೆಯರ ಪರ ಸಾಕಷ್ಟು ಕಾರ್ಯಕ್ರಮ ಮಾಡಿದ್ದೇವೆ. ನನ್ನ ಹೇಳಿಕೆಯನ್ನು ತಿರುಚಿದ್ದು ಸರಿಯಲ್ಲ. ಯಾರಿಗೆ ತೊಂದರೆ ಆದ್ರೂ ಇಲಾಖೆ ಹೊಣೆ ಮಾಡಿದ್ದೇನೆ. ನನ್ನ ಹೇಳಿಕೆಯಿಂದ ನೋವಾಗಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.