ನಿಮ್ಮ ಮಕ್ಕಳು ಪ್ರತಿ ಮಾತಿಗೂ ಕಿರಿಕಿರಿ, ಜಗಳ ಮಾಡುವುದು, ಸಿಕ್ಕ ವಸ್ತುಗಳನ್ನೆಲ್ಲ ಎಸೆಯುವುದು ಮಾಡುತ್ತಿದ್ದಾರಾ? ಇದಕ್ಕೆ ಮುಖ್ಯವಾಗಿ ಹಾರ್ಮೋನ್‌ಗಳ ಬದಲಾವಣೆ ಜೊತೆಗೆ ಮಕ್ಕಳು ವಾಸವಾಗಿರುವ ಸುತ್ತ ಮುತ್ತಲಿನ ವಾತವರಣ ಕಾರಣವಾಗಿರಬಹುದು. ಈ ನಿಟ್ಟಿನಲ್ಲಿ ಮಕ್ಕಳ ಗಲಾಟೆ, ಸಿಟ್ಟನ್ನು ನಿಯಂತ್ರಿಸಲು ಇಲ್ಲಿ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ.
ಸಮಸ್ಯೆ ಪರಿಹರಿಸುವ ಕೌಶಲ್ಯ ಬೆಳೆಸುವುದು
ಸವಾಲುಗಳು ಎದುರಾದಾಗ ಪೋಷಕರನ್ನೇ ಎದುರು ನೋಡುವ ಬದಲು ಸ್ವಯಂ ಮಕ್ಕಳೇ ತಮ್ಮ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗವನ್ನು ಬೆಳೆಸಬೇಕು.
ಮಕ್ಕಳೊಂದಿಗೆ ಸ್ನೇಹ
ಪೋಷಕರು ಮತ್ತು ಶಿಕ್ಷಕರು ಮಕ್ಕಳೊಂದಿಗೆ ಸ್ನೇಹದಿಂದ ನಡೆದುಕೊಳ್ಳಬೇಕು. ಇದರಿಂದ ಮಕ್ಕಳು ತಮ್ಮ ಮನಸ್ಸಿನ ಭಾವನೆಯನ್ನು, ಒತ್ತಡ, ನೋವು, ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಮುಂದಾಗುತ್ತಾರೆ.
ಪ್ರೋತ್ಸಾಹ ಮತ್ತು ಪ್ರೇರಣೆ
ತಮ್ಮ ಮಕ್ಕಳ ಸಣ್ಣ-ಸಣ್ಣ ಸಾಧನೆಗಳನ್ನು ಪ್ರೋತ್ಸಾಹಿಸಬೇಕು. ಪ್ರೋತ್ಸಾಹ ಮತ್ತು ಪ್ರೇರಣೆ ಸಿಗದಿದ್ದಾಗ ಸಾಮಾನ್ಯವಾಗಿ ಅವರೊಳಗೆ ಕೋಪ, ಅಸಹನೆಯ ಭಾವನೆ ಉಂಟಾಗುತ್ತದೆ.
ಮುಕ್ತ ಸಂವಹನಕ್ಕೆ ಪ್ರೇರಣೆ
ಮಕ್ಕಳಲ್ಲಿ ಉಂಟಾಗುವ ತಲ್ಲಣಗಳನ್ನು ಮುಕ್ತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುವ ವಾತವರಣವನ್ನು ಕಲ್ಪಿಸಿಕೊಡುವುದು ಅತೀ ಮುಖ್ಯ.