ಹೊಸದಿಗಂತ ಡಿಜಿಟಲ್ ಡೆಸ್ಕ್;
ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ WAVES 2025 ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಕರಣ್ ಜೋಹರ್, ದೀಪಿಕಾ ಪಡುಕೋಣೆ, ಶಾರುಖ್ ಖಾನ್ ಸೇರಿದಂತೆ ಅನೇಕ ತಾರೆಯರು ಭಾಗವಹಿಸಿದ್ದರು.
ಈ ಕಾರ್ಯಕ್ರಮ ನಾಲ್ಕು ದಿನಗಳ ಕಾಲ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಾಲಿವುಡ್, ಟಾಲಿವುಡ್, ಮಾಲಿವುಡ್ ಸೇರಿದಂತೆ ಅನೇಕ ಚಿತ್ರತಾರೆಯರು ಹಾಜರಿದ್ದರು.
ರಣಬೀರ್ ಕಪೂರ್ ಮತ್ತು ಅಕ್ಷಯ್ ಕುಮಾರ್, ನಿರ್ದೇಶಕ ರಾಜಮೌಳಿ ಸೇರಿಂದತೆ ಇಡೀ ಚಿತ್ರರಂಗ ನೆರೆದಿತ್ತು.
ಈ ಕಾರ್ಯಕ್ರಮದಡಿಯಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಹ ಆಯೋಜಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು. ಮುಂಬೈನಲ್ಲಿ ನಡೆದ ವಿಶ್ವ ಆಡಿಯೋ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆ 2025- WAVES 2025 ರಲ್ಲಿ ಪ್ರಧಾನಿ ಮೋದಿ ಎಲ್ಲಾ ಕಲಾವಿದರು, ವಿಷಯ ರಚನೆಕಾರರು, ಸೃಜನಶೀಲ ಚಿಂತಕರನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದು, 100 ಕ್ಕೂ ಹೆಚ್ಚು ರಾಷ್ಟ್ರಗಳ ಕಲಾವಿದರು, ಹೂಡಿಕೆದಾರರು ಮತ್ತು ನೀತಿ ನಿರೂಪಕರು ಇಲ್ಲಿ ಒಂದರ ಅಡಿಯಲ್ಲಿ ಒಟ್ಟುಗೂಡಿದ್ದಾರೆ ಎಂದಿದ್ದಾರೆ.
ಬಾಲಿವುಡ್ ಕಿಂಗ್ ಶಾರುಖ್ ಹಾಗೂ ಸೈಫ್ ಅಲಿ ಖಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಪ್ಪು ಜಾಕೆಟ್ ಹಾಗೂ ಕಪ್ಪು ಪಾಂಟ್‌ನಲ್ಲಿ ಶಾರುಕ್ ಮಿಂಚಿದ್ದಾರೆ. ಸಾರಾ ಅಲಿ ಖಾನ್, ಕಾರ್ತಿಕ್ ಆರ್ಯನ್, ಸೇರಿದಂತೆ ಬಾಲಿವುಡ್‌ನ ಅನೇಕ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.