ದಿನದಿಂದ ದಿನಕ್ಕೆ ಮಕ್ಕಳ ಆಹಾರದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಅದು ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳ ಮೂಲವಾಗುತ್ತಿದೆ. ಮಕ್ಕಳ ದೇಹ, ಮನಸ್ಸು, ಮತ್ತು ಭವಿಷ್ಯವನ್ನು ಹಾಳುಮಾಡುವ ಈ ಸಿಹಿಯ ಅಡ್ಡ ಪರಿಣಾಮಗಳನ್ನ ಅರಿಯೋಣ!
ಸ್ಥೂಲತೆ
ಹೆಚ್ಚಿನ ಸಕ್ಕರೆ ಸೇವನೆಯಿಂದ ದೇಹದಲ್ಲಿ ಅತಿಯಾದ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದಾಗಿ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಬೊಜ್ಜು ಕಾಣಿಸಿಕೊಳ್ಳತ್ತದೆ.
ಹಲ್ಲಿನ ಸಮಸ್ಯೆಗಳು
ಸಕ್ಕರೆ ಹಲ್ಲುಗಳ ಶತ್ರು! ಇದು ಬ್ಯಾಕ್ಟೀರಿಯಾಗೆ ಆಹಾರವಾಗಿ, ಹಲ್ಲು ಹುಳುಕು, ಹಲ್ಲು ನೋವು ಮತ್ತು ಇನ್ಫೆಕ್ಷನ್ ಉಂಟುಮಾಡುತ್ತದೆ.
ಎನರ್ಜಿ ಯಲ್ಲಿ ಏರುಪೇರು
ಸಕ್ಕರೆಯು ಮಕ್ಕಳಲ್ಲಿ ತಾತ್ಕಾಲಿಕ ಉತ್ಸಾಹ ಮತ್ತು ಚುರುಕನ್ನು ನೀಡಬಹುದು, ಆದರೆ ಕೆಲವೇ ಹೊತ್ತಿನಲ್ಲಿ ಅವರ ಎನರ್ಜಿ ಕಡಿಮೆಯಾಗಬಹುದು. ಇದು ಕೇವಲ ತಾತ್ಕಾಲಿಕ ಶಮನವಷ್ಟೇ.
ಮಧುಮೇಹ ಮತ್ತು ಹೃದ್ರೋಗದ ಭೀತಿ
ಸಕ್ಕರೆಯ ನಿಯಂತ್ರಣವಿಲ್ಲದ ಸೇವನೆಯು ಇತ್ತೀಚೆಗೆ ಮಕ್ಕಳಲ್ಲಿಯೇ ಟೈಪ್-2 ಮಧುಮೇಹ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ರೋಗನಿರೋಧಕ ಶಕ್ತಿಯ ಕಡಿಮೆ
ಹೆಚ್ಚು ಸಕ್ಕರೆಯ ಸೇವನೆಯು ಶರೀರದ ಪ್ರತಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿ, ಮಕ್ಕಳನ್ನು ಸುಲಭವಾಗಿ ಸೋಂಕುಗಳಿಗೆ ತುತ್ತಾಗುವಂತೆ ಮಾಡುತ್ತದೆ.
ಮೂಡ್ ಸ್ವಿಂಗ್ ಮತ್ತು ಹಠಮಾರಿತನ
ಸಕ್ಕರೆ ತಿನ್ನುವ ಮಕ್ಕಳು ತುಂಬಾ ಹಠ ಮತ್ತು ಅಸಹನೀಯವಾಗಿ ನಡೆದುಕೊಳ್ಳುವ ಸಾಧ್ಯತೆ ಇದೆ. ಸಕ್ಕರೆ ಅವರನ್ನು ಬೇಸರ, ಕೋಪ, ಮತ್ತು ನಿರಾಶೆಯಂತಹ ಮೂಡ್ ಸ್ವಿಂಗ್ ಒಳಪಡಿಸುತ್ತದೆ.
ಸಿಹಿಯಾದ ಜೀವನಕ್ಕಾಗಿ, ನಿಯಂತ್ರಿತ ಸಿಹಿ ಅತ್ಯಗತ್ಯ! ಆದ್ದರಿಂದ, ಮಕ್ಕಳ ಆರೋಗ್ಯವನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿ, ಅವರ ಆಹಾರದಲ್ಲಿ ಸಕ್ಕರೆಯ ಸಮತೋಲನವನ್ನು ಕಾಪಾಡಿ .