SHOCKING| ಆಟೋ ಚಾಲಕ ನೇಣಿಗೆ ಶರಣು: ಕೃತ್ಯಕ್ಕೆ ಕಾರಣವಾಯಿತೇ ಸಾಲ ವಸೂಲಿ ಕರೆ?

ಹೊಸದಿಗಂತ ವರದಿ ಮಂಗಳೂರು:

ಸಾಲ ವಸೂಲಿಗಾರರ ಕರೆ ಬಂದ ಬೆನ್ನಿಗೇ ಆಟೋ ರಿಕ್ಷಾ ಚಾಲಕ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

ಪುತ್ತೂರು ಸಮೀಪದ ಪೆರಿಯತ್ತೋಡಿ ನಿವಾಸಿ ದಿ.ಹುಕ್ರಪ್ಪ ಗೌಡ ಅವರ ಪುತ್ರ ಕೃಷ್ಣ (40) ಆತ್ಮಹತ್ಯೆ ಮಾಡಿಕೊಂಡವರು.

ಬೆಳಗ್ಗೆ ಅವರು ರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ದಿದ್ದರು. ಅದಾದ ಬಳಿಕ ಮಧ್ಯಾಹ್ನದ ವೇಳೆ ಅವರಿಗೆ ಸಾಲ ವಸೂಲಿಗಾರರ ಕರೆ ಬಂದಿತ್ತು. ಇದರ ಬೆನ್ನಿಗೇ ಮನೆಯ ಬಳಿಯ ಮರವೊಂದರ ಗೆಲ್ಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆ ಆರಂಭವಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಮೃತರು ಸಹೋದರರಾದ ಕುಶಾಲಪ್ಪ, ರಿಕ್ಷಾ ಚಾಲಕ ಶಿವರಾಮ, ಹರೀಶ್ ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ. ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!