PARENTING | ನಿಮ್ಮ ಹಾಗೂ ಮಕ್ಕಳ ನಡುವಿನ ಸಂಬಂಧ ಚನ್ನಗಿರಬೇಕಾ? ಹಾಗದ್ರೆ ಈ ಆರ್ಟಿಕಲ್ ಓದಿ

ಮಕ್ಕಳ ಮತ್ತು ಪೋಷಕರ ಸಂಬಂಧ ಪ್ರೀತಿ, ಗೌರವ, ಜವಾಬ್ದಾರಿ ಮತ್ತು ವಿಶ್ವಾಸದ ಮೇಲೆ ನಿರ್ಮಿತವಾಗಿರುತ್ತೆ. ಪೋಷಕರು ಮಕ್ಕಳಿಗೆ ಶಿಕ್ಷಣ, ಶಿಷ್ಟಾಚಾರ, ಭದ್ರತೆ ಮತ್ತು ಮಾರ್ಗದರ್ಶನ ನೀಡುತ್ತಾರೆ. ಅವರು ಮಕ್ಕಳ ಭವಿಷ್ಯ ಕಟ್ಟುವ ಮಹತ್ವದ ಪಾತ್ರವಹಿಸುತ್ತಾರೆ.

ಮಕ್ಕಳು ಪೋಷಕರನ್ನು ಗೌರವಿಸಿ, ಅವರ ಮಾತು ಕೇಳಿ, ಮತ್ತು ಪ್ರೀತಿಯಿಂದ ಸಂಬಂಧವನ್ನು ಬಲಪಡಿಸಬೇಕು. ಆಧುನಿಕ ಜೀವನಶೈಲಿ ಮತ್ತು ಜನರೇಷನ್ ಗ್ಯಾಪ್ ನಿಂದಾಗಿ ಈ ಸಂಬಂಧದಲ್ಲಿ ಸವಾಲುಗಳು ಎದುರಾಗಬಹುದು.

ಪೋಷಕರ ಪಾತ್ರ:

ಶಿಶು ಜನಿಸಿದಾಗಿನಿಂದಲೇ ಪೋಷಕರು ಅವರ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ನೈತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಪೋಷಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿ, ಉತ್ತಮ ನಾಗರಿಕರಾಗಿ ಬದುಕುವಂತೆ ಸಹಾಯ ಮಾಡುತ್ತಾರೆ.

ಹೆತ್ತವರ ಪ್ರೀತಿ ಮಕ್ಕಳಿಗೆ ಭದ್ರತೆಯನ್ನು ಒದಗಿಸಿಕೊಡುತ್ತದೆ, ಇದು ಅವರ ಆತ್ಮವಿಶ್ವಾಸ ಹೆಚ್ಚಲು ಸಹಾಯ ಮಾಡುತ್ತದೆ. ಜೊತೆಗೆ ಕುಟುಂಬದ ಸಂಸ್ಕೃತಿ, ಪರಂಪರೆ, ಭಾಷೆ, ಮತ್ತು ಜೀವನ ಮೌಲ್ಯಗಳನ್ನು ಗುರುತು ಮಾಡುವಲ್ಲಿ ಸಹಾಯ ಮಾಡುತ್ತದೆ.

ಮಕ್ಕಳ ಪಾತ್ರ:

ಮಕ್ಕಳಿಗೆ ಪೋಷಕರನ್ನು ಗೌರವಿಸುವ ಮತ್ತು ಅವರ ಮಾರ್ಗದರ್ಶನವನ್ನು ಸ್ವೀಕರಿಸುವ ಜವಾಬ್ದಾರಿ ಇದೆ. ವಯಸ್ಸಾದಾಗ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ನೈತಿಕ ಹೊಣೆಗಾರಿಕೆಯಾಗಿದೆ. ಪೋಷಕರು ಕೊಡುವ ಉಪದೇಶ ಮತ್ತು ಅನುಭವಗಳನ್ನು ಗಮನಿಸಬೇಕು. ಹಾಗೂ ಅವರ ಜೊತೆಗೆ ಭಾವನಾತ್ಮಕ ಬಂಧವನ್ನು ಬಲಪಡಿಸಬೇಕು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!