Parenting | ಬೆಳಗ್ಗೆ ಎದ್ದ ತಕ್ಷಣ ಈ ಅಭ್ಯಾಸಗಳನ್ನು ನಿಮ್ಮ ಮುದ್ದು ಮಕ್ಕಳಿಗೆ ರೂಢಿ ಮಾಡಿಸಿ! ಅವರು ದಿನವಿಡೀ ಸಂತೋಷವಾಗಿರುತ್ತಾರೆ

ಮಕ್ಕಳ ದಿನದ ಪ್ರಾರಂಭ ಅವರ ಮನಸ್ಥಿತಿ ಹಾಗೂ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಬೆಳಿಗ್ಗೆ ಸರಿಯಾದ ಹ್ಯಾಬಿಟ್ಸ್ ಅಥವಾ ರೂಟೀನ್ ಇದ್ದರೆ, ಮಕ್ಕಳು ಹೆಚ್ಚು ಶಾಂತವಾಗಿಯೂ, ಸಂತೋಷವಾಗಿಯೂ ದಿನವಿಡೀ ಇರಬಹುದು. ಇಲ್ಲಿ 5 ಸರಳ ಆದರೆ ಪರಿಣಾಮಕಾರಿಯಾದ ಬೆಳಗಿನ ರೂಟೀನ್ ಗಳನ್ನು ನೀಡಲಾಗಿದ್ದು ಇವು ಮಕ್ಕಳಲ್ಲಿ ಒತ್ತಡ ಕಡಿಮೆ ಮಾಡಿ ಆತ್ಮವಿಶ್ವಾಸ ಹೆಚ್ಚಿಸುತ್ತವೆ.

ಪ್ರಾರ್ಥನೆ ಅಥವಾ ಧ್ಯಾನ (Morning Prayer or Meditation)
ಬೆಳಿಗ್ಗೆ 5 ನಿಮಿಷಗಳ ಪ್ರಾರ್ಥನೆ ಅಥವಾ ಬ್ರೀಥಿಂಗ್ ಮೆಡಿಟೇಷನ್‌ ನಿಂದ ದಿನ ಪ್ರಾರಂಭ ಮಾಡುವುದರಿಂದ ಮಕ್ಕಳ ಮನಸ್ಸು ಶಾಂತವಾಗುತ್ತದೆ. ಇದು ಆಂತರಿಕ ನೆಮ್ಮದಿಯನ್ನು ತರಲು ಸಹಾಯಮಾಡುತ್ತದೆ ಮತ್ತು ದಿನದ ಚಟುವಟಿಕೆಗೆ ತಯಾರಾಗಿ ಮನಸ್ಸನ್ನು ಸ್ಥಿರಗೊಳಿಸುತ್ತದೆ.

16 Pleasing Children's Morning Prayers

ಸಕಾರಾತ್ಮಕ ಸಂಭಾಷಣೆ (Positive Talk with Parents)
ಬೆಳಿಗ್ಗೆ “ನಿನ್ನ ದಿನ ಇವತ್ತು ಚೆನ್ನಾಗಿರುತ್ತೆ” ಅಥವಾ “I love you” ಅನ್ನುವ ಪ್ರೋತ್ಸಾಹದ ಮಾತುಗಳು ಮಕ್ಕಳ ಮನೋಭಾವವನ್ನು ಉಜ್ವಲಗೊಳಿಸುತ್ತವೆ. ಇದು ಅವರಿಗೆ ಕುಟುಂಬದ ಪ್ರೀತಿಯ ಭರವಸೆಯನ್ನು ನೀಡುತ್ತದೆ ಮತ್ತು ಒತ್ತಡವಿಲ್ಲದ ರೀತಿಯಲ್ಲಿ ದಿನ ಪ್ರಾರಂಭವಾಗುತ್ತದೆ.

Parents and their kids need to pick up these key life skills | Parenting  News - The Indian Express

ಆರೋಗ್ಯಕರ ಉಪಾಹಾರ (Nutritious Breakfast)
ಒಳ್ಳೆಯ ಬೆಳಗಿನ ಉಪಾಹಾರ ಮಕ್ಕಳ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗೆ ಆಧಾರ. ಹಣ್ಣುಗಳು, ಓಟ್ಸ್, ಮತ್ತು ಪ್ರೋಟೀನ್ ಹೊಂದಿರುವ ಆಹಾರ ದಿನವಿಡೀ ಶಕ್ತಿ ನೀಡುತ್ತದೆ ಹಾಗೂ ಎನರ್ಜಿ ಸ್ವಲ್ಪವೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

Nutritious Breakfast Ideas for Kids - Energize Your Mornings

ಯೋಗ ಅಥವಾ ಲಘು ವ್ಯಾಯಾಮ (Simple Yoga or Stretching)
ಚಿಕ್ಕದಾದ ಯೋಗ ಆಸನಗಳು ಅಥವಾ 5 ನಿಮಿಷ ಸ್ಟ್ರೆಚ್ ಮಾಡುವುದರಿಂದ ಮಕ್ಕಳ ದೇಹ ಹಾಗೂ ಮನಸ್ಸು ರಿಫ್ರೆಶ್ ಆಗುತ್ತದೆ. ಇದು ರಕ್ತಸಂಚಾರ ಹೆಚ್ಚಿಸುತ್ತದೆ ಹಾಗೂ ತಕ್ಷಣದ ಶಕ್ತಿಯನ್ನು ಒದಗಿಸುತ್ತದೆ.

Tiny Yogi Adventures: 5 Easy Yoga Exercises for Kids to Boost Their Co

ದಿನದ ಸಣ್ಣ ಪ್ಲ್ಯಾನ್ ಮಾಡುವುದು (Creating a Small Day Plan)
ಮಕ್ಕಳಿಗೆ “ಇವತ್ತು ನೀನು ಏನು ಮಾಡಬೇಕು ಅನ್ಕೊಂಡಿದೀಯಾ?” ಅಂತ ಕೇಳಿ, ಅವರನ್ನು ಒಂದು ಪ್ಲ್ಯಾನ್ ಮಾಡೋಕೆ ಉತ್ತೇಜಿಸಿ. ಇದು ಅವರಿಗೆ ದಿನದ ಮೇಲೆ ನಿಯಂತ್ರಣವಿದೆ ಅನ್ನುವ ಭಾವನೆ ಕೊಡುತ್ತದೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

Mom hugging her child boy and talking to him | Premium Vector

ಮಕ್ಕಳ ಬೆಳಗಿನ ಸಮಯದ ಹ್ಯಾಬಿಟ್ಸ್ ಅನ್ನು ಸ್ವಲ್ಪ ಸಮಯ ನೀಡಿ ರೂಪಿಸಿದರೆ, ಅದು ಅವರ ಮನಸ್ಸಿನ ಸ್ಥಿರತೆ, ಶಾಂತಿ ಮತ್ತು ಸಂತೋಷದ ಮೇಲೆ ದೀರ್ಘಕಾಲಿಕ ಪ್ರಭಾವ ಬೀರುತ್ತದೆ. ಈ ಸರಳ ಬೆಳಗಿನ ಹವ್ಯಾಸಗಳು ಮಕ್ಕಳ ಮನಸ್ಸಿನ ನೆಮ್ಮದಿಗೆ ದಾರಿ ಮಾಡಿಕೊಡುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!