PARENTING | ನನ್ನ ಮಗಳು ಕೂಡ ಕಾನ್ಫಿಡೆಂಟ್‌ ಆಗಬೇಕು ಅನ್ನೋ ಕನಸು ನಿಮ್ಮದಾ? ಮಗಳನ್ನು ಈ ರೀತಿ ಬೆಳೆಸಿ

ನಮ್ಮ ಮಗಳಿಗೆ ಯಾವುದೇ ಸಮಸ್ಯೆ ಬರಬಾರದು ಅನ್ನುವ ಪೋಷಕರು ಒಂದೆಡೆಯಾದರೆ ಕಷ್ಟಗಳು ಬರದೇ ಇರೋದು ಅಸಾಧ್ಯವಾದ ಮಾತು. ಬಟ್‌ ನಮ್ಮ ಮಗಳು ಎಂಥ ಸಮಸ್ಯೆ ಬಂದರೂ ಅದನ್ನು ಕಾನ್ಫಿಡೆನ್ಸ್‌ನಿಂದ ಎದುರಿಸಲಿ ಎಂದು ಪೋಷಕರು ಅಂದುಕೊಳ್ತಾರೆ. ಈ ರೀತಿ ಕಾನ್ಫಿಡೆಂಟ್‌ ಮಗಳನ್ನು ಬೆಳೆಸೋದು ನಿಮ್ಮ ಕೈಯಲ್ಲೇ ಇದೆ. ಆಕೆಗೆ ಕಾನ್ಫಿಡೆನ್ಸ್‌ ನೀಡಿ ಮುಂದಿನ ಜೀವನ ಸುಗಮವಾಗಿಸಿ.

ಈಗಿನ ಸಮಾಜದಲ್ಲಿ ಹೆಣ್ಣುಮಕಳನ್ನು ಆತ್ಮವಿಶ್ವಾಸದಿಂದ ಬೆಳೆಸುವುದು ತುಂಬಾ ಮುಖ್ಯವಾಗಿದೆ. ಮಕ್ಕಳಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಎರಡು ಬರುವುದು ಪೋಷಕರಿಂದ. ಯಾವರೀತಿಯಾಗಿ ಮಕ್ಕಳನ್ನು ಬೆಳೆಸುತ್ತಾರೆ, ಸಮಾಜವನ್ನು ಎದುರಿಸಲು ಹೇಗೆಲ್ಲ ತಿಳಿಹೇಳಿ ಕೊಡುತ್ತಾರೆ ಎನ್ನುವುದು ಮುಖ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳನ್ನು ಈಗಿನ ಸಮಾಜಕ್ಕೆ ತಕ್ಕಂತೆ ಬೆಳೆಸುವುದು ಒಂದು ಸವಾಲೇ ಆಗಿದೆ. ನಿಮ್ಮ ಹೆಣ್ಣುಮಕ್ಕಳನ್ನು ಸ್ವಾಭಿಮಾನಿಯಾಗಿ ಬೆಳೆಸಲು ಕೆಲವು ಅಂಶಗಳನ್ನು ಅಳವಡಿಸಿಕೊಳ್ಳಬಹುದು.

ಆತ್ಮವಿಶ್ವಾಸ ತುಂಬಿರುವ ಮಗಳನ್ನು ಬೆಳೆಸೋದಕ್ಕೆ ಕೆಲವು ಸಲಹೆಗಳು ಇಲ್ಲಿವೆ..

1.ದೇಹದ ಬಗ್ಗೆ ಅಥವಾ ಬಣ್ಣದ ಬಗ್ಗೆ ಕೀಳರಿಮೆ ಬೆಳೆಸಲು ಬಿಡಬೇಡಿ

ನಿಮ್ಮ ಮಗಳು ಸಣ್ಣಗಿರಲಿ ಅಥವಾ ದಪ್ಪಗಿರಲಿ ಹೇಗೆ ಇದ್ದರು ಚಂದ ಎಂದು ಆಕೆಯ ಮನಸ್ಸಿಗೆ ನಾಟುವಂತೆ ಹೇಳಿ. ತನ್ನ ದೇಹದ ಬಗ್ಗೆ ಕೀಳರಿಮೆ ಬೆಳೆಸಲು ಬಿಡಬೇಡಿ. ಮುಖದ ಬಣ್ಣ ಯಾವುದೇ ಕಾರಣಕ್ಕೂ ಮುಖ್ಯವಾಗುವುದಿಲ್ಲ. ಒಳ್ಳೆಯ ಮನಸ್ಸು ಬೇಕು ಎನ್ನುವುದನ್ನು ಮನದಟ್ಟು ಮಾಡಿಕೊಡಿ.

2.ಕ್ರೀಡೆಗಳನ್ನು ಆಡಲು ಪ್ರೋತ್ಸಾಹಿಸಿ

ತಂಡಗಳಲ್ಲಿ ಆಡುವ ಹುಡುಗಿಯರು ಹೆಚ್ಚಿನ ಸ್ವಾಭಿಮಾನವನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ. ಕಡಿಮೆ ಸ್ವಾಭಿಮಾನ ಹೊಂದಿರುವ ಹುಡುಗಿಯರು ತಂಡಗಳಲ್ಲಿ ಆಡಲು ಪ್ರಾರಂಭಿಸಿದಾಗ ಇರರರಿಂದ ಪ್ರೇರಿತಗೊಂಡು ತಮ್ಮ ಸ್ವಾಭಿಮಾನ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಾರೆ.

3.ನಿಮ್ಮ ಮಗಳ ಧ್ವನಿಯಾಗಿ

ನಿಮ್ಮ ಮಗಳಿಗೆ ಏನು ಬೇಕು ಏನು ಬೇಡ ಎಂದು ನಿರ್ಧಾರ ಮಾಡಲು ಬಿಡಿ. ಅದು ತಪ್ಪಾದಲ್ಲಿ ಯಾಕೆ ತಪ್ಪು ಎಂದು ತಿಳಿ ಹೇಳಿ. ಹಾಗೆ ಮಗಳು ಮಡಿದ ಆಯ್ಕೆ ಸರಿ ಇದ್ದರೆ ತುಂಬು ಹೃದಯದಿಂದ ಗೌರವಿಸಿ.

4. ಹೊಗಳಿಕೆ ಪ್ರೋತ್ಸಾಹ ನೀಡಿ

ನಿಮ್ಮ ಮಗಳು ತಯಾರಾದಾಗ ಅಥವಾ ಏನಾದರು ಹೊಸದಾಗಿ ಕಲಿಯಲು ಪ್ರಯತ್ನಿಸಿದಾಗ ಆಕೆಯನ್ನು ಪ್ರೋತ್ಸಾಹಿಸಿ. ಆಕೆ ಚಂದವಾಗಿ ತಯಾರಾದಗ ಸಣ್ಣದಾಗಿ ಹೊಗಳಿಕೆ ನೀಡಿ ಇದರಿಂದ ಆಕೆಯಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

5.ಕೌಶಲ್ಯಗಳನ್ನು ನಿರ್ಮಿಸಲು ಅವಳಿಗೆ ಸಹಾಯ ಮಾಡಿ

ವಸ್ತುಗಳನ್ನು ಪಡೆದುಕೊಳ್ಳುವುದರ ಮೇಲೆ ಕೇಂದ್ರೀಕರಿಸುವ ಬದಲು ಆತ್ಮವಿಶ್ವಾಸದ ಪ್ರಜ್ಞೆಯನ್ನು ಬೆಳೆಸುವ ಚಟುವಟಿಕೆಗಳಲ್ಲಿ ಅವಳನ್ನು ತೊಡಗಿಸಿಕೊಳ್ಳಿ. ಕ್ರೀಡೆ, ರಂಗಭೂಮಿ, ಸಂಗೀತ, ಕಲೆಗಳಲ್ಲಿ ತೊಡಗಿಸಿಕೊಂಡರೆ ಸೃಜನಶೀಲತೆ ಅಥವಾ ಚಟುವಟಿಕೆಯ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.

6.ನಿಮ್ಮ ಮಗಳ ಕಾರ್ಯಕ್ಷಮತೆಗಿಂತ ಆಕೆಯ ಪ್ರಯತ್ನಗಳಿಗಾಗಿ ಪ್ರಶಂಸಿಸಿ

ಫಲಿತಾಂಶದ ಮೇಲೆ ಕಡಿಮೆ ಗಮನಹರಿಸಿ ಮತ್ತು ಪ್ರಯತ್ನಗಳು ಮತ್ತು ಹೊಸ ಕೌಶಲ್ಯಗಳ ಅಭಿವೃದ್ಧಿಯ ಮೇಲೆ ಹೆಚ್ಚು ಗಮನ ಹರಿಸಿ ಪಾಂಡಿತ್ಯವು ಆತ್ಮವಿಶ್ವಾಸವನ್ನು ನಿರ್ಮಿಸುತ್ತದೆ ಮತ್ತು ವೈಫಲ್ಯವನ್ನು ಸಹಿಸಿಕೊಳ್ಳಲು ಕಲಿಸುತ್ತದೆ.

7.ಅಪ್ಪಂದಿರು ನಿಮ್ಮ ಮಗಳನ್ನು ದುರ್ಬಲ ಹೆಣ್ಣುಮಗುವಿನಂತೆ ನಡೆಸಿಕೊಳ್ಳಬೇಡಿ

ತಂದೆಗಳು ಹುಡುಗಿಯರನ್ನು ದುರ್ಬಲರು, ಅಸಹಾಯಕರು, ಸಣ್ಣ ಜೀವಿಗಳು ಎಂದು ಪರಿಗಣಿಸಬೇಡಿ. ಬದಲಿಗೆ, ಅವಳಿಗೆ ಅವಕಾಶ ಮತ್ತು ಸಾಧನಗಳನ್ನು ನೀಡಿ, ತನ್ನ ಧ್ವನಿಯನ್ನು ಬಳಸಲು ಮತ್ತು ತನಗಾಗಿ ಮಾತನಾಡಲು, ಕ್ರೀಡೆಗಳನ್ನು ಆಡಲು, ತನ್ನನ್ನು ತಾನೇ ಎತ್ತಿಕೊಳ್ಳಲು ಅವಕಾಶ ನೀಡಿ. ಯಾವುದೇ ಕೆಲಸವಾಗಲಿ ನಾನು ಅದನ್ನು ನನ್ನ ಮಗನೊಂದಿಗೆ ಮಾಡುವುದಾದರೆ, ನನ್ನ ಮಗಳೊಂದಿಗೆ ಅದನ್ನು ಮಾಡಲು ನಾನು ಸಿದ್ಧರಾಗಿರಬೇಕು ಎಂದು ಹೇಳುವುದು ಆಕೆಯ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

8.ಏನೇ ಇರಲಿ ನೀವು ಅವಳನ್ನು ಪ್ರೀತಿಸುತ್ತೀರಿ ಎಂದು ಆಕೆಗೆ ತಿಳಿದಿರಲಿ

ಅವಳ ನೋಟವು ಹೇಗೆ ಬದಲಾಗಬಹುದು ಅಥವಾ ಅವಳು ಹೇಗೆ ಡ್ರೆಸ್ ಮಾಡಿದರೂ ಅಥವಾ ಅವಳು ಏನೇ ಮಾಡಿದರು ನೀವು ಅವಳನ್ನು ಪ್ರೀತಿಸುತ್ತೀರಿ ಎಂದು ಅವಳು ತಿಳಿದಿರಬೇಕು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!