January18, 2026
Sunday, January 18, 2026
spot_img

Parenting | ಮಕ್ಕಳಲ್ಲಿ ಮೊಬೈಲ್ ಬಳಕೆ : ಮಯೋಫಿಯಾ ಸಮಸ್ಯೆ ಪೋಷಕರಿಗೆ ಎಚ್ಚರಿಕೆಯ ಕರೆಗಂಟೆ

ಇಂದಿನ ಡಿಜಿಟಲ್‌ ಯುಗದಲ್ಲಿ ಮೊಬೈಲ್ ಫೋನ್‌ಗಳು ಮಕ್ಕಳ ಜೀವನದ ಅವಿಭಾಜ್ಯ ಭಾಗವಾಗಿವೆ. ಊಟ ಮಾಡುವಾಗ, ಆಟ ಆಡುವಾಗ, ನಿದ್ದೆ ಮಾಡುವಾಗ ಎಲ್ಲೆಡೆ ಫೋನ್‌ಗಳೇ ಸಂಗಾತಿ. ಆದರೆ ಈ ಅಭ್ಯಾಸವು ಮಕ್ಕಳ ಕಣ್ಣಿನ ಆರೋಗ್ಯಕ್ಕೆ ದೊಡ್ಡ ಹಾನಿ ಮಾಡುತ್ತಿದೆ ಎಂಬುದನ್ನು ಅನೇಕ ಪೋಷಕರು ಕಡೆಗಣಿಸುತ್ತಿದ್ದಾರೆ. ವಿಶೇಷವಾಗಿ, ಮೊಬೈಲ್ ಮತ್ತು ಟಿವಿ ಮುಂದೆ ಹೆಚ್ಚು ಸಮಯ ಕಳೆಯುತ್ತಿರುವ ಮಕ್ಕಳಲ್ಲಿ ಮಯೋಫಿಯಾ (Myopia) ಎಂಬ ದೃಷ್ಟಿ ಸಮಸ್ಯೆ ಹೆಚ್ಚುತ್ತಿದೆ.

ಮಯೋಫಿಯಾ ಎಂದರೇನು?

ಮಯೋಫಿಯಾ ಎಂದರೆ ದೂರದ ವಸ್ತುಗಳು ಸ್ಪಷ್ಟವಾಗಿ ಕಾಣದಿರುವ ಸ್ಥಿತಿ. ಹತ್ತಿರದ ವಸ್ತುಗಳು ಚೆನ್ನಾಗಿ ಕಾಣಿಸಿದರೂ, ದೂರದ ವಸ್ತುಗಳು ಮಂಜಾಗಿ ಕಾಣಿಸುತ್ತವೆ. ವೈದ್ಯಕೀಯವಾಗಿ ಇದನ್ನು ಸಮೀಪದೃಷ್ಟಿ ದೋಷ ಎಂದು ಕರೆಯುತ್ತಾರೆ.

ಮಕ್ಕಳಲ್ಲಿ ಹೆಚ್ಚುತ್ತಿರುವ ಸಮಸ್ಯೆ

ಇತ್ತೀಚಿನ ವರ್ಷಗಳಲ್ಲಿ ಮಯೋಫಿಯಾ ಪ್ರಕರಣಗಳು ಡಬಲ್ ಆಗಿವೆ.

ಪ್ರಪಂಚದಲ್ಲಿ 100 ಜನರಲ್ಲಿ 28% ಜನರಿಗೆ ಈ ಸಮಸ್ಯೆ ಇದೆ.

2050ರ ಹೊತ್ತಿಗೆ ಅರ್ಧ ಜನಸಂಖ್ಯೆಗೆ ಮಯೋಫಿಯಾ ಕಾಣಿಸಿಕೊಳ್ಳಬಹುದೆಂಬ ಆತಂಕ ವೈದ್ಯರದ್ದು.

ಮಕ್ಕಳಲ್ಲಿ ಸುಮಾರು 25% ಜನರು ಈಗಾಗಲೇ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಮಯೋಫಿಯಾ ಹೆಚ್ಚಾಗುವ ಪ್ರಮುಖ ಕಾರಣಗಳು

ಹೆಚ್ಚು ಹೊತ್ತು ಮೊಬೈಲ್, ಟ್ಯಾಬ್, ಕಂಪ್ಯೂಟರ್ ನೋಡುವುದು

ಡಿಮ್ ಲೈಟ್‌ನಲ್ಲಿ ಓದುವುದು ಅಥವಾ ಸಾಧನ ಬಳಕೆ

ಡಿಜಿಟಲ್ ಡಿವೈಸ್‌ಗಳ ನಿರಂತರ ಬಳಕೆ

ವಿಟಮಿನ್ D ಕೊರತೆ

ವಿರಾಮ ಕೊಡದೇ ಓದುವ ಅಭ್ಯಾಸ

ಪೋಷಕರಿಗೆ ತಜ್ಞರ ಸಲಹೆ

16 ವರ್ಷದೊಳಗಿನ ಮಕ್ಕಳು ಪ್ರತಿದಿನ ಕನಿಷ್ಠ 2 ಗಂಟೆ ಹೊರಗೆ ಆಟ ಆಡಬೇಕು.

ಮೊಬೈಲ್, ಟಿವಿ ಬಳಕೆಗೆ ಸಮಯದ ಮಿತಿಯನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ನೋಡಿಕೊಳ್ಳಬೇಕು.

ಕಣ್ಣಿನ ಆರೋಗ್ಯ ತಪಾಸಣೆಗಾಗಿ ನಿಯಮಿತವಾಗಿ ನೇತ್ರ ತಜ್ಞರನ್ನು ಸಂಪರ್ಕಿಸಬೇಕು.

Must Read

error: Content is protected !!