ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ನ ಮತ್ತೊಂದು ಜೋಡಿ ಪೋಷಕರಾಗುತ್ತಿರುವ ಖುಷಿ ಹಂಚಿಕೊಂಡಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ವಿವಾಹವಾಗಿದ್ದ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಈಗ ಪೋಷಕರಾಗುತ್ತಿದ್ದಾರೆ.
ತಾಯಿಯಾಗುತ್ತಿರುವ ಸಂಭ್ರಮವನ್ನು ನಟಿ ಹರ್ಷಿಕಾ ವಿಭಿನ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ. ಹರ್ಷಿಕಾ, ಭುವನ್ ಹಾಗೂ ಅವರ ಕುಟುಂಬದವರು ಕೊಡವ ಶೈಲಿಯ ಉಡುಗೆ ತೊಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.
ಇಂದಿನವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲು ಇರಲಿ. ಅಕ್ಟೋಬರ್ ಗೆ ಕಾತುರದಿಂದ ಕಾಯುತ್ತಿದ್ದೇವೆ” ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹರ್ಷಿಕಾ ಬರೆದುಕೊಂಡಿದ್ದಾರೆ.
View this post on Instagram