PARENTING | ಪೋಷಕರೇ ಇಲ್ಲಿ ಕೇಳಿ, ರಂಪ ಮಾಡ್ತಿರೋದು ಮಕ್ಕಳಲ್ಲ, ನೀವು!

ಮಕ್ಕಳು ಅಳ್ತಾರೆ, ಬೇಕಾದ ವಸ್ತುಗಾಗಿ ನಾಟಕ ಮಾಡ್ತಾರೆ, ರಸ್ತೆ ಮೇಲೆ ಎಲ್ಲೆಂದರಲ್ಲಿ ಕುಳಿತು ರಂಪ ಮಾಡ್ತಾರೆ. ಆಗ ನೀವೇನು ಮಾಡ್ತೀರಿ? ನಾಲ್ಕು ಬಾರಿಸಿ ಮನೆಗೆ ಕರೆದುಕೊಂಡು ಬರ‍್ತೀರಾ, ಇಲ್ಲ ನೀವು ಕೂಗಾಡಿ ರಂಪ ಮಾಡ್ತೀರಾ, ಅಲ್ವಾ? ಈ ಬಗ್ಗೆ ಅರ್ಥಮಾಡಿಕೊಳ್ಳೋಕೆ ಪುಟ್ಟ ಕಥೆ ಕೇಳಿ..

Not Suitable for Children: Why I Won't Be Having Kids | The New Yorkerಆವತ್ತು ಸಂಜೆ ತಡ್ಕೋಳೋಕೆ ಆಗ್ಲಿಲ್ಲ, ನಾನು ನನ್ನ ಮಗ ಇಬ್ಬರೇ ಇದ್ವಿ, ನನಗೆ ಕಂಟ್ರೋಲ್ ಮಾಡಲು ಆಗದಷ್ಟು ಅಳು ಬಂದುಹೋಯ್ತು, ಅಳು ನಿಲ್ತಾನೆ ಇಲ್ಲ, ಕಾರಣ ತಿಳೀತಿಲ್ಲ. ಮಗನ ಎದುರೇ ರಾಶಿ ರಾಶಿ ಕಣ್ಣೀರು ಸುರಿಸಿದೆ.

It's ok to cry (in front of your children) - Mindful Little Minds Psychologyಆದರೆ ಆತ ಏನು ಮಾಡಿದ ಅನ್ನೋದನ್ನು ನೆನಸಿಕೊಂಡ್ರೆ ಈಗಲೂ ನನಗೆ ಆಶ್ಚರ್ಯ ಆಗುತ್ತದೆ.

ಅಮ್ಮ ಅಳು ನಿಲ್ಸು ಅಂತ ಅವನು ಹೇಳಿಲ್ಲ, ಹಾಗಂತ ಪಕ್ಕಕ್ಕೆ ಬಂದು ಕುಳಿತು ಸಮಾಧಾನವೂ ಮಾಡಲಿಲ್ಲ. ನೀನು ಅತ್ತುಬಿಟ್ಟು ಹೊರಗೆ ಬಾ ಅಂತ ರೂಮ್ ಬಿಟ್ಟು ಹೋಗಲಿಲ್ಲ, ಹಾಗಂತ ಥೋ ಅಮ್ಮ ಯಾಕಿಷ್ಟು ಅಳ್ತಿದ್ದಾರೆ, ಅವರ ಅಳು ಸದ್ದು ನನಗೆ ಕಿರಿಕಿರಿ ಆಗ್ತಿದೆ ಅನ್ನೋ ಹಾಗೂ ಭಾವನೆ ತೋರಿಸಿಲ್ಲ.

ಅಮ್ಮ ನಿನ್ನ ಅಳು, ಕೂಗಾಟ ನನಗೆ ಇಷ್ಟ ಆಗ್ತಿಲ್ಲ, ಬಾಯ್ಮುಚ್ಚು ಎಂದೂ ಹೇಳಿಲ್ಲ, ಓವರ್ ಆಕ್ಟಿಂಗ್ ಮಾಡ್ತಿದ್ದೀಯ, ಅಂಥದ್ದೇನಾಯ್ತು ಅಂತಲೂ ಕೇಳಿಲ್ಲ. ಅಮ್ಮ ನಿನ್ನನ್ನ ಹೇಗೆ ಹ್ಯಾಂಡಲ್ ಮಾಡೋದು ಅರ್ಥ ಆಗ್ತಿಲ್ಲ ಅಂತ ಉಫ್ ಉಸಿರುಬಿಡಲಿಲ್ಲ. ಸಣ್ಣ ವಿಷಯಕ್ಕೆ ಯಾಕೆ ಇಷ್ಟು ಅಳಬೇಕು ಎಂದೂ ಕೇಳಿಲ್ಲ.

ನನ್ನ ಪಕ್ಕ ಸುಮ್ಮನೆ ಹಾಗೇ, ಒಂದೂ ಪದ ಹೇಳದೆ, ಮುಖದಲ್ಲಿ ಒಂದೂ ಭಾವನೆ ತೋರಿಸದೇ ಸುಮ್ಮನೆ ಕೂತಿದ್ದ. ಆದರೆ ಅವನ ಕಣ್ಣಲ್ಲಿ ನನ್ನ ಮೇಲೆ ಪ್ರೀತಿ, ನನ್ನ ನೋವನ್ನು ಅರ್ಥಮಾಡಿಕೊಂಡು ಸಮಾಧಾನಿಸ್ತಿದ್ದಾನೆ ಅನ್ನೋ ಬೆಳಕು ಕಾಣ್ತಿತ್ತು.

ಐದು ನಿಮಿಷದ ನಂತರ ಬಂದು ನನ್ನನ್ನು ಜೋರಾಗಿ ಬಿಗಿದಪ್ಪಿದ, ಏನೋ ತಮಾಷೆ ಮಾಡ್ತಾ ನನ್ನನ್ನು ನಗಿಸಲು ಯತ್ನಿಸಿದ…

Why it's okay to cry in front of your kids - The Washington Postಈ ಸನ್ನಿವೇಶದಿಂದ ಒಂದೇ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ, ಮಕ್ಕಳು ಕಣ್ಣೀರಿಡುವಾಗ, ದುಃಖಿಸುವಾಗ ನನ್ನ ಮಗ ನನ್ನನ್ನು ಹೇಗೆ ನೋಡಿಕೊಂಡನೋ ನಾನೂ ಹಾಗೇ ಅವನನ್ನು ನೋಡಬೇಕಾ?

ಮಕ್ಕಳು ಅಳುವಾಗ ನಾವೆಷ್ಟು ಮಾತನಾಡ್ತೀವಿ, ಅಳಬೇಡ, ಸಣ್ಣ ವಿಷಯಕ್ಕೆಲ್ಲಾ ಅಳ್ತಾರಾ, ಅತ್ರೆ ಬಾರಿಸ್ತೀನಿ, ಅಳಬೇಡ ಬಾಯ್ಮುಚ್ಚು.. ಈ ರೀತಿಯೇ ಹೆಚ್ಚು ರಿಯಾಕ್ಟ್ ಮಾಡ್ತೀವಿ ಅಲ್ವಾ?

ಮರೆಯಬೇಡಿ, ಅವರು ಮಕ್ಕಳಿರಬಹುದು, ಆದರೆ ಅವರೂ ಮನುಷ್ಯರೇ. ನೀವು ಅವರಿಗೆ ಜನ್ಮ ಕೊಟ್ಟಿರಬಹುದು, ಹಾಗಂತ ಭಾವನೆಗಳ ಮೇಲೆ ಹಿಡಿತಸಾಧಿಸಬೇಡಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!