August 4, 2026
Tuesday, August 4, 2026
spot_img

ಪೋಷಕರೇ, ಮಕ್ಕಳನ್ನು ಶಾಲೆಗೆ ಕಳಿಸುವ ಮುನ್ನ ಈ ಐದು ಸೇಫ್ಟಿ ರೂಲ್ಸ್‌ ಹೇಳಿಕೊಡಿ

ಪೋಷಕರು ಮಕ್ಕಳನ್ನು ಬಿಟ್ಟು ನೆಮ್ಮದಿಯಾಗಿ ಇರೋ ಜಾಗ ಅಂದ್ರೆ ಶಾಲೆ ಮಾತ್ರ. ನಮ್ಮಂತೆಯೇ ಮಕ್ಕಳನ್ನು ನೋಡಿಕೊಳ್ತಾರೆ ಎನ್ನುವ ಧೈರ್ಯದಿಂದ ಮಕ್ಕಳನ್ನು ಶಾಲೆಗೆ ಕಳಿಸ್ತಾರೆ. ಆದರೆ ಶಾಲೆಗೆ ಹೋಗುವ ಪ್ರತೀ ಮಕ್ಕಳಿಗೂ ಈ ಐದು ಸೇಫ್ಟಿ ರೂಲ್ಸ್‌ ಗೊತ್ತಿರಬೇಕು..

ಸ್ನೇಹಿತರನ್ನು ಮುಟ್ಟುವ ರೀತಿ ಮಕ್ಕಳಿಗೆ ಕಳಿಸಿ ಕೊಡಿ. ಕೆಟ್ಟ ಸ್ಪರ್ಶದ ಬಗ್ಗೆ ಹೇಳಿಕೊಡಿ. ಮಕ್ಕಳು, ಶಿಕ್ಷಕರು ಇನ್ಯಾರೇ ಕೆಟ್ಟ ರೀತಿಯಲ್ಲಿ ಮುಟ್ಟಿದರೆ ಮಕ್ಕಳು ಬಂದು ಮನೆಗೆ ಹೇಳುವಂತಿರಲಿ.

ಯಾವುದೇ ಮಕ್ಕಳು ಜೋರು ಮಾಡೋದು, ಹೊಡೆಯೋದು, ರ್ಯಾಗ್‌ ಮಾಡಿದರೆ ಶಿಕ್ಷಕರ ಬಳಿ ಹೇಳಬೇಕು ಅನ್ನೋದನ್ನು ಕಲಿಸಿ ಕೊಡಿ.

ಯಾರ್ಯಾರ ಜೊತೆಯಲ್ಲೋ ಮನೆಗೆ ಬರುವಂತಿಲ್ಲ. ಶಾಲೆ ಮುಗಿದ ನಂತರ ಪೋಷಕರು ಬರುವವರೆಗೂ ಕಾಯಬೇಕು. ಪರಿಚಯ ಇಲ್ಲದವರ ಜೊತೆ ಮಾತನಾಡದೇ ಇರುವುದು ಒಳ್ಳೆಯದು ಎಂದು ಹೇಳಿಕೊಡಿ. ಶಾಲೆಯ ಸ್ಟಾಫ್‌, ಟೀಚರ್ಸ್‌ ಬಳಿ ಮಾತ್ರ ಇರುವುದು ಬೆಟರ್‌.

ಯಾವುದೇ ಎಮರ್ಜೆನ್ಸಿ ಸಂದರ್ಭ ಶಾಲೆಗೆ ಬಂದಾಗ ಅಲ್ಲಿ ಇಲ್ಲಿ ಬಚ್ಚಿಟ್ಟುಕೊಳ್ಳಬಾರದೆಂದು ಹೇಳಿಕೊಡಿ. ಬೆಂಕಿ, ಲಾಕ್‌ಡೌನ್‌, ಪ್ರಕೃತಿ ವಿಕೋಪದಿಂದ ಆಗುವ ಸಮಸ್ಯೆ ವೇಳೆ ಬಾತ್‌ರೂಮ್‌ ಅಥವಾ ಇನ್ನಿತರೆ ಜಾಗಗಳಲ್ಲಿ ಬಚ್ಚಿಟ್ಟುಕೊಳ್ಳಬಾರದು. ಶಿಕ್ಷಕರ ಕಣ್ಣೆದುರೇ ಇದ್ದು ಅವರು ಹೇಳುವ ಮಾತನ್ನು ಕೇಳಬೇಕು ಎಂದು ಹೇಳಿಕೊಡಿ.

ಶಾಲೆಯ ಬಳಿ, ಶಾಲೆಯ ನಂತರ ಯಾವುದೇ ಅನುಮಾನಾಸ್ಪದ ವ್ಯಕ್ತಿ ಕಾಣಿಸಿದರೆ ಶಿಕ್ಷಕರ ಬಳಿ ಹೋಗಿ ಹೇಳಬೇಕು. ಏನೇ ಸಮಸ್ಯೆಯಾದರೂ ಬಾಯಿಬಿಟ್ಟು ಹೇಳುವುದು ಹಾಗೂ ಸಮಸ್ಯೆ ಇದ್ದಾಗ ಸಹಾಯ ಕೇಳುವುದನ್ನು ಕಲಿಯಬೇಕು/

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !