ವದಂತಿಗಳ ನಡುವೆ ಏರ್‌ಪೋರ್ಟ್‌ನಲ್ಲಿ ಮತ್ತೆ ಜೋಡಿಯಾಗಿ ಕಂಡ ಪರಿಣಿತಿ, ರಾಘವ್ ಚಡ್ಡಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿವಾಹದ ವದಂತಿಗಳ ನಡುವೆ, ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಬುಧವಾರ ರಾತ್ರಿ ದೆಹಲಿ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಪರಿಣಿತಿ ಮತ್ತು ರಾಘವ್ ಇತ್ತೀಚೆಗೆ ಮುಂಬೈನಲ್ಲಿ ಸುತ್ತಾಡುತ್ತಿರುವಾಗ ಡೇಟಿಂಗ್ ವದಂತಿಗಳನ್ನು ಹುಟ್ಟುಹಾಕಿದರು. ಪರಿಣಿತಿ ಇತ್ತೀಚೆಗೆ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮನೆಯಲ್ಲಿ ಕಾಣಿಸಿಕೊಂಡು ರಾಘವ್ ಅವರೊಂದಿಗಿನ ವಿವಾಹದ ಗುಸು ಗುಸು ಸುದ್ದಿ ಆಚೆ ಬಂದಿತ್ತು.

ದೆಹಲಿ ಏರ್‌ಪೋರ್ಟ್‌ನಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು, ಯಾರ ಕಣ್ಣಿಗೂ ಕಾಣದಿರಲೆಂದು ಬೇಗ ಬೇಗ ಕಾರಿನ ಬಳಿ ನಡೆದ ವಿಡಿಯೋ/ಫೋಟೋಗಳು ವೈರಲ್‌ ಆಗಿವೆ.

ಪ್ರಸ್ತುತ ಪರಿಣಿತಿ ‘ಚಮ್ಕಿಲಾ’ ಚಿತ್ರದಲ್ಲಿ ದಿಲ್ಜಿತ್ ದೋಸಾಂಜ್ ಅವರೊಂದಿಗೆ ತೆರೆ ಹೆಂಚಿಕೊಂಡಿದ್ದಾರೆ. ಇಮ್ತಿಯಾಜ್ ಅಲಿ ನಿರ್ದೇಶಿಸಿದ ಈ ಚಿತ್ರವು ಇಬ್ಬರು ಜನಪ್ರಿಯ ಪಂಜಾಬಿ ಗಾಯಕರಾದ ಅಮರಜೋತ್ ಕೌರ್ ಮತ್ತು ಅಮರ್ ಸಿಂಗ್ ಚಮ್ಕಿಲಾ ಅವರ ಸುತ್ತ ಸುತ್ತುತ್ತದೆ.

ಪರಿಣಿತಿ ಅಮರಜೋತ್ ಪಾತ್ರದಲ್ಲಿ ಕಾಣಿಸಿಕೊಂಡರೆ, ದಿಲ್ಜಿತ್ ಚಮ್ಕಿಲಾ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಮರ್ ಸಿಂಗ್ ಚಮ್ಕಿಲಾ, ಅವರ ಪತ್ನಿ ಅಮರಜೋತ್ ಕೌರ್ ಮತ್ತು ಅವರ ಸಂಗೀತ ತಂಡದ ಸದಸ್ಯರನ್ನು ಮಾರ್ಚ್ 8, 1988 ರಂದು ಹತ್ಯೆ ಮಾಡಲಾಯಿತು. ಇವರ ಕತೆ ಕುರಿತ ಸಿನಿಮಾ ಬರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!