Monday, December 4, 2023

Latest Posts

CINE | ಸರೋವರದ ಮಧ್ಯೆ ಪರಿಣೀತಿ, ರಾಘವ್ ಚಡ್ಡಾ ವಿವಾಹ, ಬೋಟ್ ಮೂಲಕ ಸೆಕ್ಯುರಿಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಳೆ ಉದಯಪುರದಲ್ಲಿ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ.

ಮದುವೆ ಆಗುತ್ತಿರುವ ಸ್ಥಳ ಸರೋವರದ ಮಧ್ಯದಲ್ಲಿ ಇರೋದು ಮದುವೆಯ ಹೈಲೈಟ್ ಆಗಿದೆ. ಸರೋವರದ ಮಧ್ಯೆ ಮದುವೆ ನಡೆಯುತ್ತಿದ್ದು, ಬೋಟ್‌ಗಳನ್ನು ಬಳಸಿ ಸೆಕ್ಯುರಿಟಿ ನೀಡಲು ನಿರ್ಧರಿಸಲಾಗಿದೆ.

ಈಗಾಗಲೇ ಪರಿಣಿತಿ ಹಾಗೂ ರಾಘವ್ ಉದಯ್‌ಪುರಕ್ಕೆ ತಲುಪಿದ್ದಾರೆ. ಮೂರು ದಿನಗಳ ಕಾಲ ಹೊಟೇಲ್ ಬುಕ್ ಆಗಿದ್ದು, ಸಾಕಷ್ಟು ನಿಯಮಗಳನ್ನು ಮಾಡಲಾಗಿದೆ.

ಮೊಬೈಲ್ ಬಳಕೆ ಮಾಡುವಂತಿಲ್ಲ, ಹೊರಗಿನಿಂದ ಹೊಸಬರು ಎಂಟ್ರಿ ಕೊಡುವಂತಿಲ್ಲ. ಇರುವವರೂ ಮದುವೆ ಮುಗಿಯುವರೆಗೂ ಹೋಗುವಂತಿಲ್ಲ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!