ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಪರಿಣೀತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಮದುವೆ ದಿನಾಂಕ ಫಿಕ್ಸ್ ಆಗಿದ್ದು, ಐಷಾರಾಮಿ ಹೊಟೇಲ್‌ನಲ್ಲಿ ಇಬ್ಬರು ಹಸೆಮಣೆ ಏರಲಿದ್ದಾರೆ.
ಸೆ.23ರಂದು ಈ ಜೋಡಿ ಮದುವೆಯಾಗಲಿದ್ದು, ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಮದುವೆಯಲ್ಲಿ ರಾರಾಜಿಸಲಿದ್ದಾರೆ. ರಾಜಸ್ಥಾನದಲ್ಲಿ ಸೆಲೆಬ್ರಿಟಿಗಳ ಮದುವೆ ಆಗುತ್ತಿರುವುದು ಇದೇ ಮೊದಲೇನಲ್ಲ, ಈಗಾಗಲೇ ಕಟ್ರೀನಾ-ವಿಕ್ಕಿ, ಸಿದ್ಧಾರ್ಥ್-ಕಿಯಾರಾ ಅಲ್ಲಿಯೇ ಮದುವೆಯಾಗಿದ್ದಾರೆ.
ಪರಿಣೀತಿ ಹಾಗೂ ರಾಘವ್ ಕೂಡ ರಾಜಸ್ಥಾನದ ಲೀಲಾ ಪ್ಯಾಲೇಸ್‌ನಲ್ಲಿ ಮದುವೆಯಾಗುತ್ತಿದ್ದಾರೆ. ಇಲ್ಲಿ ಒಂದು ರೂಮ್ ಬೆಲೆ 30 ಸಾವಿರ ರೂಪಾಯಿಯಾಗಿದೆ. ಇದು ಆರಂಭಿಕ ಬೆಲೆ, ಇನ್ನಷ್ಟು ಫೀಚರ‍್ಸ್ ಬೇಕೆಂದರೆ 10 ಲಕ್ಷ ರೂಪಾಯಿವರೆಗಿನ ರೂಮ್‌ಗಳಿವೆ. ಈ ಜೋಡಿ ಇಡೀ ಹೊಟೇಲ್‌ನ ರೂಮ್‌ಗಳನ್ನು ಬಾಡಿಗೆ ಪಡೆದಿದೆ.