ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯ ಫೈನಲ್ಗೆ ಭಾರತದ ಶೂಟರ್ ಅರ್ಜುನ್ ಬಬುಟಾ ಭಾನುವಾರ ಅರ್ಹತೆ ಗಳಿಸಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದ ಅವರು ಪ್ರಶಸ್ತಿ ಸುತ್ತಿಗೆ ಏರಿದ್ದಾರೆ. 25ರ ವರ್ಷದ ಬಬುಟಾ 105.7, 104.9, 105.5, 105.4, 104.0 ಮತ್ತು 104.6 ಅಂಕಗಳೊದಿಗೆ ಒಟ್ಟಾರೆ 630.1 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದರು.
2016 ರಿಂದ ರಾಷ್ಟ್ರೀಯ ತಂಡದಲ್ಲಿ ಇರುವ ಚಂಡೀಗಢದ ಬಬುತಾ, ಕಳೆದ ವರ್ಷ ಚಾಂಗ್ವಾನ್ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ಶಿಪ್ ಮೂಲಕ ಒಲಿಂಪಿಕ್ ಅರ್ಹತೆ ಪಡೆದಿದ್ದರು.
ಅರ್ಹತಾ ಸುತ್ತಿನಲ್ಲಿ ಚೀನಾದ ಶೆಂಗ್ ಲಿಹಾವೊ 631.7 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದರು, ಟೋಕಿಯೊ ಕ್ರೀಡಾಕೂಟದಲ್ಲಿ ದೇಶದ ಯಾಂಗ್ ಹೌರಾನ್ ಸ್ಥಾಪಿಸಿದ ಅರ್ಹತಾ ದಾಖಲೆಯಾದ 632.7 ಕ್ಕಿಂತ ಕೇವಲ ಒಂದು ಅಂಕ ಹಿಂದೆ ಬಿದ್ದಿದ್ದಾರೆ.