ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಕಿಯಲ್ಲಿ ಭಾರತ ತಂಡ ಗೆಲುವು ದಾಖಲಿಸಿದೆ.
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಹಾಕಿ ತಂಡ 3-2 ಗೋಲುಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಇದು ಒಲಿಂಪಿಕ್ಸ್‌ನಲ್ಲಿ ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧ 52 ವರ್ಷಗಳ ಬಳಿಕ ಸಿಕ್ಕ ಐತಿಹಾಸಿಕ ಗೆಲುವು.
ಇದಕ್ಕೂ ಮುನ್ನ 1972ರ ಒಲಿಂಪಿಕ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು 3-1 ರಿಂದ ಸೋಲಿಸಿತ್ತು. ಅದಾದ 50 ವರ್ಷಗಳ ಬಳಿಕ ಈ ಗೆಲುವು ದಾಖಲಿಸಿದೆ.
ಭಾರತ ತಂಡ ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಬಿ ಗುಂಪಿನ 2ನೇ ಸ್ಥಾನಿಯಾಗಿ ಲೀಗ್ ಹೋರಾಟ ಮುಗಿಸಿದೆ.
ಹಾಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ತಂಡ ಅಗ್ರಸ್ಥಾನ ಸಂಪಾದಿಸಿದೆ. ಬಿ ಗುಂಪಿನಿಂದ ಭಾರತ ಬೆಲ್ಜಿಯಂ ಅಲ್ಲದೆ, ಆಸ್ಟ್ರೇಲಿಯಾ ಹಾಗೂ ಅರ್ಜೆಂಟೀನಾ ತಂಡಗಳು ಕ್ವಾರ್ಟರ್ ಫೈನಲ್‌ಗೇರಿವೆ. ಎ ಗುಂಪಿನಿಂದ ನೆದರ್ಲೆಂಡ್ಸ್, ಜರ್ಮನಿ, ಗ್ರೇಟ್ ಬ್ರಿಟನ್ ಹಾಗೂ ಸ್ಪೇನ್ ತಂಡಗಳು ಮುಂದಿನ ಹಂತಕ್ಕೇರಿದೆ.