ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ತರುಣ್ ದೀಪ್ ರೈ, ಪ್ರವೀಣ್ ಜಾಧವ್ ಹಾಗೂ ಯುವ ಬಿಗ್ಲಾರ ಧೀರಜ್ ಬೊಮ್ಮದೇವರ ಅವರನ್ನೊಳಗೊಂಡ ಭಾರತದ ಪುರುಷರ ಆರ್ಚರಿ ತಂಡ ಪದಕ ಗೆಲ್ಲುವ ಭರವಸೆ ಮೂಡಿಸಿದೆ.
ಗುರುವಾರ ನಡೆದ ಪುರುಷರ ಆರ್ಚರಿ ಶ್ರೇಯಾಂಕ ಸುತ್ತಿನಲ್ಲಿ ಭಾರತವು 2013 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸುವ ಮೂಲಕ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದೆ. ಇದಕ್ಕೂ ಮುನ್ನ ನಡೆದ ಮಹಿಳಾ ವಿಭಾಗದದಲ್ಲಿ ಭಾರತ 4ನೇ ಸ್ಥಾನ ಗಳಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.
ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಹಲವು ಏರಿಳಿತ ಕಂಡ ಭಾರತೀಯ ಬಿಲ್ಗಾರರು ಕೊನೆಗೂ ಉತ್ತಮ ಸ್ಥಾನದೊಂದಿಗೆ ಮಿಂಚಿದರು. ಧೀರಜ್ ಬೊಮ್ಮದೇವರ 681 ಅಂಕದೊಂದಿಗೆ 4ನೇ ಸ್ಥಾನ ಪಡೆದರೆ, ತರುಣ್ ದೀಪ್ ರೈ(674 ಅಂಕ) 14ನೇ ಮತ್ತು ಪ್ರವೀಣ್ ಜಾಧವ್ 39ನೇ (658 ಅಂಕ) ಸ್ಥಾನ ಪಡೆದರು.