Paris Olympics | ಬಾಕ್ಸಿಂಗ್​ ನಲ್ಲಿ ಕ್ವಾರ್ಟರ್​ ಫೈನಲ್​ ಗೆ ಲಗ್ಗೆ ಇಟ್ಟ ಲವ್ಲಿನಾ ಬೊರ್ಗೊಹೇನ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌ ಅವರು ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇಂದು(ಬುಧವಾರ) ನಡೆದ 75 ಕೆ.ಜಿ. ವಿಭಾಗದ 16ರ ಸುತ್ತಿನ ಬಾಕ್ಸಿಂಗ್​ ಹೋರಾಟದಲ್ಲಿ ನಾರ್ವೆಯ ಸನ್ನಿವಾ ಹೊಫ್‌ಸ್ತಾಡ್‌ ಅವರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ಏಕಮುಖವಾಗಿ ಸಾಗಿದ ಈ ಹೋರಾಟದಲ್ಲಿ ಭಾರತೀಯ ಬಾಕ್ಸರ್​ ಮುಂದೆ ನಾರ್ವೆಯ ಪ್ರತಿಸ್ಪರ್ಧಿ ಸಂಪೂರ್ಣ ಶರಣಾದರು. ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಲವ್ಲೀನಾ ಅವರು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್​ ಫೈನಲ್​ ಪಂದ್ಯ ಆಗಸ್ಟ್ 4 ರಂದು ನಡೆಯಲಿದೆ. ಇಲ್ಲಿ ಗೆದ್ದರೆ ಪದಕವೊಂದು ಖಾತ್ರಿಯಾಗಲಿದೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!