Paris Olympics | ಭಾರತಕ್ಕೆ ಪದಕ ಜಸ್ಟ್​​ ಮಿಸ್: ಆರ್ಚರಿಯಲ್ಲಿ ಸೋತ ಅಂಕಿತಾ, ಧೀರಜ್ ಜೋಡಿ!​

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ಯಾರಿಸ್​ ಒಲಿಂಪಿಕ್ಸ್​ನ ಆರ್ಚರಿ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕದ ಹಣಾಹಣಿಯಲ್ಲಿ ಭಾರತ ಧೀರಜ್​ ಬೊಮ್ಮದೇವರ ಹಾಗೂ ಅಂಕಿತಾ ಅಮೆರಿಕ ವಿರುದ್ಧ ಸೋಲು ಕಾಣುವ ಮೂಲಕ ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಜಸ್ಟ್ ಮಿಸ್ ಮಾಡಿಕೊಂಡಿದ್ದಾರೆ.

ಅಂಕಿತಾ ಹಾಗೂ ಧೀರಜ್​ ಸೆಮಿಫೈನಲ್​ಗೇರಿದಾಗ ಭಾರತಕ್ಕೆ ಪದಕವೊಂದರ ಭರವಸೆ ಮೂಡಿತ್ತು. ಆದರೆ, ಕೊರಿಯಾ ವಿರುದ್ಧ ಸೆಮಿಫೈನಲ್ ಪಂದ್ಯ ಸೋಲು ಉಂಟಾಯಿತು. ಅಮೆರಿಕದ ತಂಡದ ಬಿಲ್ಲುಗಾರರು ಪದಕ ಗೆದ್ದು ಸಂಭ್ರಮಿಸಿದರು.

ಸ್ಪರ್ಧೆಯ ಆರಂಭದಲ್ಲೇ ಭಾರತ ಹಿನ್ನಡೆ ಅನುಭವಿಸಿತು. ಮೊದಲೆರಡು ಸೆಟ್​ಗಳನ್ನು ಸೋತು ಒತ್ತಡಕ್ಕೆ ಬಿತ್ತು. ಮೂರನೇ ಸೆಟ್​ ಗೆದ್ದರೂ ನಾಲ್ಕನೇ ಸೆಟ್ ಅನ್ನು 37 ಅಂಕಗಳೊಂದಿಗೆ ಗೆಲ್ಲುವ ಮೂಲಕ ಯುಎಸ್ಎ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ಈ ಸೆಟ್​ನಲ್ಲಿ ಅಂಕಿತಾ 8 ಮತ್ತು 8 ಅಂಕ ಗಳಿಸಿದರೆ, ಧೀರಜ್ 9 ಮತ್ತು 10 ಅಂಕ ಗಳಿಸಿದರು. ಯುಎಸ್ಎ ಪರ ಬ್ರಾಂಡಿ 10 ಮತ್ತು 9 ಅಂಕಗಳನ್ನು ಗಳಿಸಿದರೆ, ಕೇಸಿ 9 ಮತ್ತು 9 ಅಂಕಗಳನ್ನು ಗಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!