OLYMPICS 2024 | ಇಂದಿನಿಂದ ಪ್ಯಾರಿಸ್ ಒಲಿಂಪಿಕ್ಸ್ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್‌ಗೆ ಇಂದು ಚಾಲನೆ ದೊರೆಯಲಿದೆ. ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಜುಲೈ 26 ಕ್ಕೆ ನಿಗದಿಪಡಿಸಲಾಗಿದ್ದರೂ, ಕೆಲವು ಪಂದ್ಯಾವಳಿಗಳು ಇಂದಿನಿಂದ ಶುರುವಾಗಲಿದೆ.

ಅದರಂತೆ ಫುಟ್​ಬಾಲ್ ಪಂದ್ಯದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್​ಗೆ ಚಾಲನೆ ದೊರೆಯಲಿದ್ದು, ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಮೊರಾಕ್ಕೊ ತಂಡಗಳು ಮುಖಾಮುಖಿಯಾಗಲಿದೆ.

ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಪಂದ್ಯಾವಳಿ ಆರಂಭಿಸುವ ಸಂಪ್ರದಾಯ ಶುರುವಾಗಿದ್ದು, 1992 ರಲ್ಲಿ. ಬಾರ್ಸಿಲೋನಾ ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಉದ್ಘಾಟನೆಗೂ ಮುನ್ನ ಕೆಲ ಪಂದ್ಯಗಳನ್ನು ನಡೆಸಲಾಗಿತ್ತು. ಇದಾದ ಬಳಿಕ ಪ್ರತಿ ಒಲಿಂಪಿಕ್ಸ್​ನಲ್ಲೂ ಈ ಸಾಂಪ್ರದಾಯ ಮುಂದುವರೆಸಲಾಗಿದೆ.

ಇದಕ್ಕೆ ಮುಖ್ಯ ಕಾರಣವೆಂದರೆ ಆಟಗಾರರ ವಿಶ್ರಾಂತಿ. ಅಂದರೆ ಫುಟ್​ಬಾಲ್, ರಗ್ಬಿ, ಬಾಸ್ಕೆಟ್​ಬಾಲ್​ನಂತಹ ಕ್ರೀಡೆಗಳಲ್ಲಿ ಕಣಕ್ಕಿಳಿಯುವ ಆಟಗಾರರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುತ್ತದೆ. ಹೀಗಾಗಿ ಒಂದು ಪಂದ್ಯದಿಂದ ಮತ್ತೊಂದು ಪಂದ್ಯಕ್ಕೆ 48 ಗಂಟೆಗಳ ವಿಶ್ರಾಂತಿ ನೀಡುವ ಸಲುವಾಗಿ ಉದ್ಘಾಟನೆಗೂ ಮುನ್ನ ಕೆಲ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!