Paris Paralympics । ಭಾರತಕ್ಕೆ ಮತ್ತೊಂದು ಪದಕ: ಏರ್ ಪಿಸ್ತೂಲ್ ಶೂಟಿಂಗ್​ನಲ್ಲಿ ಬೆಳ್ಳಿ ಗೆದ್ದ ಮನೀಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಸಿಕ್ಕಿದೆ. ಒಂದೇ ದಿನದಲ್ಲಿ ತನ್ನ ನಾಲ್ಕನೇ ಪದಕವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.

10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು. ಒಟ್ಟು 24 ಸುತ್ತುಗಳಲ್ಲಿ 234.9 ಅಂಕಗಳನ್ನು ಕಲೆಹಾಕಿದ ಮನೀಶ್, ಭಾರತಕ್ಕೆ ನಾಲ್ಕನೇ ಪದಕ ಗೆದ್ದುಕೊಟ್ಟಿದ್ದಾರೆ.

ಕಳೆದ ಪ್ಯಾರಾಲಿಂಪಿಕ್ಸ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದ ಮನೀಶ್ ನರ್ವಾಲ್ ಒಟ್ಟು 234.9 ಅಂಕ ಗಳಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದರು. ಆದರೆ ಈ ಬಾರಿ ಪದಕದ ಬಣ್ಣ ಬದಲಾಗಿದ್ದು, ಮನೀಶ್ ಕೊರಳಿಗೆ ಚಿನ್ನದ ಬದಲು ಬೆಳ್ಳಿ ಪದಕ ಬಿದ್ದಿದೆ. ಇದರೊಂದಿಗೆ ಮನೀಶ್ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲಿ ಬಹು ಪದಕಗಳನ್ನು ಗೆದ್ದ ಏಕೈಕ ಆರನೇ ಭಾರತೀಯ ಅಥ್ಲೀಟ್ ಎನಿಸಿಕೊಂಡರು.

ಮನೀಶ್​ಗೂ ಮುನ್ನ ಸ್ಟಾರ್ ಶೂಟರ್ ಅವನಿ ಲೇಖರಾ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರೆ, ಇನ್ನು ಇದೇ ಈವೆಂಟ್​ನಲ್ಲಿ ಭಾರತದ ಮತ್ತೊರ್ವ ಶೂಟರ್ ಮೋನಾ ಅಗರ್ವಾಲ್ ಕಂಚಿನ ಪದಕವನ್ನು ಗೆದ್ದು 17 ನೇ ಬೇಸಿಗೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಪದಕ ಖಾತೆಯನ್ನು ತೆರೆದಿದ್ದರು. ಶೂಟಿಂಗ್ ಹೊರತುಪಡಿಸಿ ಮಹಿಳೆಯರ 100 ಮೀಟರ್ ಟಿ-35 ಓಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಭಾರತದ ಪ್ರೀತಿ ಪಾಲ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!