ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾರ್ಕಿಂಗ್ ವಿಚಾರವಾಗಿ ವೈದ್ಯರೊಬ್ಬರಿಗೆ ಕಾಂಗ್ರೆಸ್ ಮುಖಂಡನೋರ್ವ ಕಪಾಳಮೋಕ್ಷ ಮಾಡಿರುವ ಘಟನೆ ಬೆಳಗಾವಿಯ ಸದಾಶಿವ ನಗರದಲ್ಲಿ ನಡೆದಿದೆ. ಆರೀಫ್ ದೇಸಾಯಿ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಕಾಂಗ್ರೆಸ್ ಮುಖಂಡ.
ಡಾ. ಪ್ರದೀಪ್ ಎಂಬವರ ಮೇಲೆ ಹಲ್ಲೆ ನಡೆಸಿ ಅವಮಾನಿಸಿದ್ದಾರೆ. ಪತಿಯ ಮೇಲೆ ಕಾಂಗ್ರೆಸ್ ಮುಖಂಡನ ಹಲ್ಲೆಯ ವಿಡಿಯೋವನ್ನು ಡಾಕ್ಟರ್ ಪತ್ನಿ ಶ್ರುತಿ ರೆಕಾರ್ಡ್ ಮಾಡಿದ್ದಾರೆ. ನೀನು ಮಾಡುತ್ತಿರುವುದು ತಪ್ಪು ಎಂದು ಶೃತಿ ಹೇಳಿದರು ಕೂಡ ಆರೀಫ್ ದೇಸಾಯಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.
ಮನೆ ಮುಂದೆ ಕಾರು ನಿಲ್ಲಿಸಿದ್ದರಿಂದ ಗಲಾಟೆ ಆರಂಭವಾಗಿದೆ. ಇದಕ್ಕಾಗಿಯೇ ಕಾಂಗ್ರೆಸ್ ಮುಖಂಡ ಆರೀಫ್ ದೇಸಾಯಿ ಗೂಂಡಾ ವರ್ತನೆಯನ್ನು ಪ್ರದರ್ಶಿಸಿದ್ದಾರೆ. ವೈದ್ಯರ ಮೇಲೆ ಹಲ್ಲೆ ನಡೆಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ.
ಕಾಂಗ್ರೆಸ್ ಮುಖಂಡನೋರ್ವ ಪಾರ್ಕಿಂಗ್ ವಿಚಾರವಾಗಿ ಡಾಕ್ಟರ್ ಗೆ ಕಪಾಳ ಮೋಕ್ಷ ಮಾಡಿದ ಘಟನೆ ಬೆಳಗಾವಿ ಸದಾಶಿವ ನಗರದಲ್ಲಿ ನಡೆದಿದೆ. ಆರೀಫ್ ದೇಸಾಯಿ ಎಂಬ ಕಾಂಗ್ರೆಸ್ ಮುಖಂಡ ಡಾಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ.#Congress #belagavi #doctor #Fights pic.twitter.com/3tTHNhdIIi
— Harshith Achrappady (@HAchrappady) February 15, 2024