ಸಂಸತ್ ಗ್ಯಾಲರಿಯಿಂದ ಹಾರಿ ದಾಳಿಗೆ ಯತ್ನಿಸಿದ ಯುವಕನನ್ನು ಹಿಡಿದು ಥಳಿಸಿದ ಸಂಸದರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ (Loksabha) ಕಲಾಪದ ವೇಳೆ ಗ್ಯಾಲರಿಯಿಂದ ಹಾರಿ ದಾಳಿ ನಡೆಸಲು ಮುಂದಾದ ಯುವಕರಲ್ಲಿ ಓರ್ವನನ್ನು ಹಿಡಿದ ಸಂಸದರು ಸಖ್ತ್ ಗೂಸಾ ನೀಡಿದ್ದಾರೆ.

ಯುವಕ ಸಾಗರ್ ಶರ್ಮಾ ಗ್ಯಾಲರಿಯಿಂದ ಹಾರಿ ಸಂಸತ್‍ನಲ್ಲಿ ಓಡಾಡುತ್ತಿದ್ದಾಗಲೇ ಸಂಸದರೆಲ್ಲ ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ .

ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಲೋಕಸಭೆ ಗ್ಯಾಲರಿಯಿಂದ ಜಿಗಿದು ಕಲರ್ ಬಾಂಬ್ ಸಿಡಿಸಿದ್ದಾರೆ. ಇತ್ತ ಇಬ್ಬರು ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಒಟ್ಟು ನಾಲ್ವರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!