June 2, 2026
Tuesday, June 2, 2026
spot_img

ದೇವಾಲಯದ ಉತ್ಸವದಲ್ಲಿ ‘ಪಾರ್ಥಸಾರಥಿ’ಯ ಅಟ್ಟಹಾಸ: ಮದ್ದಾನೆಯ ದಾಳಿಗೆ ಓರ್ವ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇವಸ್ಥಾನ ಉತ್ಸವದ ಸಂಭ್ರಮ ಕ್ಷಣಾರ್ಧದಲ್ಲಿ ಭೀತಿಗೆ ತಿರುಗಿದ ಘಟನೆ ಕೇರಳದಲ್ಲಿ ನಡೆದಿದೆ. ಅಂಗಮಾಲಿಯ ಕಿದಂಗೂರು ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಉತ್ಸವದ ವೇಳೆ ಮದವೇರಿದ ಆನೆ ದಾಳಿ ನಡೆಸಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

‘ಮಯ್ಯನಾಡ್ ಪಾರ್ಥಸಾರಥಿ’ ಹೆಸರಿನ ಆನೆ ಏಕಾಏಕಿ ಆಕ್ರೋಶಗೊಂಡು ಅಟ್ಟಹಾಸ ಮೆರೆದಿದೆ. ಈ ವೇಳೆ ದೇವಸ್ಥಾನಕ್ಕೆ ಆನೆಯನ್ನು ಕರೆತಂದ ವಾಹನದ ಚಾಲಕ ವಿಷ್ಣು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನೆಯನ್ನು ಹಿಡಿತಕ್ಕೆ ತರಲು ಯತ್ನಿಸಿದ ಮಾವುತ ಪ್ರತಾಪ್ ಮೇಲೂ ದಾಳಿ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:

ಘಟನೆಯಿಂದ ಸ್ಥಳದಲ್ಲಿ ಭಾರೀ ಗೊಂದಲ ಉಂಟಾಗಿ, ಭಕ್ತರು ಆತಂಕದಿಂದ ಚದುರಿ ಓಡಿ ಪ್ರಾಣ ಉಳಿಸಿಕೊಂಡರು. ನಂತರ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು ಎರಡು ಗಂಟೆಗಳ ಬಳಿಕ ಆನೆಯನ್ನು ನಿಯಂತ್ರಣಕ್ಕೆ ತಂದರು.

ಈ ಘಟನೆ ಬಳಿಕ ದೇವಸ್ಥಾನ ಉತ್ಸವಗಳಲ್ಲಿ ಆನೆಗಳ ಬಳಕೆಯ ಸುರಕ್ಷತೆ ಕುರಿತು ಪ್ರಶ್ನೆಗಳು ಮತ್ತೆ ಕೇಳಿಬರುತ್ತಿದ್ದು, ವೈರಲ್ ವಿಡಿಯೋಗಳು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !