ಮ್ಯಾಂಚೆಸ್ಟರ್‌ ಸಿಟಿ – ಜಿಯೋ ನಡುವೆ ಪಾಲುದಾರಿಕೆ ಒಪ್ಪಂದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವಿಶ್ವ ಪ್ರಸಿದ್ಧ ಫುಟ್ಬಾಲ್‌ ಕ್ಲಬ್‌ ಮ್ಯಾಂಚೆಸ್ಟರ್‌ ಸಿಟಿ ಹಾಗೂ ಭಾರತದ ಮುಕೇಶ್‌ ಅಂಬಾನಿ ಒಡೆತನದ ಟೆಲಿಕಾಂ ಕಂಪನಿ ರಿಲಯನ್ಸ್‌ ಜಿಯೋ ಪ್ರಾದೇಶಿಕ ಪಾಲುದಾರಿಕೆ ಒಪ್ಪಂದವನ್ನು ಘೋಷಿಸಿವೆ. ಇದರ ಅನ್ವಯ ಜಿಯೋ ಭಾರತದಲ್ಲಿ ಫುಟ್ಬಾಲ್‌ ಕ್ಲಬ್‌ ಮ್ಯಾಂಚೆಸ್ಟರ್‌ ಸಿಟಿಯ ಅಧಿಕೃತ ಮೊಬೈಲ್ ಕಮ್ಯುನಿಕೇಷನ್ಸ್ ನೆಟ್‌ವರ್ಕ್ ಪಾಲುದಾರನಾಗಲಿದೆ.

ಭಾರತದ ಅತಿದೊಡ್ಡ ಕ್ರೀಡಾ ಮತ್ತು ಮನರಂಜನಾ ಕಂಪನಿಯಾದ ರಿಲಯನ್ಸ್ ಉಪಕ್ರಮವಾದ RISE ವರ್ಲ್ಡ್‌ವೈಡ್‌ನಿಂದ ಈ ಪಾಲುದಾರಿಕೆ ಬೆಂಬಲಿತವಾಗಿದೆ. ಈ ಸಹಭಾಗಿತ್ವದ ಮೂಲಕ ಜಿಯೋ ಹಾಗು ಮ್ಯಾಂಚೆಸ್ಟರ್‌ ಸಿಟಿ ಅಭಿಮಾನಿಗಳಿಗೆ ವಿಶೇಷ ಅನುಭವಗಳನ್ನು ನೀಡಲಿವೆ. ವಿಶೇಷ ಕೊಡುಗೆಗಳ ಜೊತೆಗೆ, JioTV, MyJio, Jio STB, JioEngage ಮತ್ತು ಇತರ ಅಪ್ಲಿಕೇಶನ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿರುವ ಜಿಯೋದ ಡಿಜಿಟಲ್ ಪರಿಸರ ವ್ಯವಸ್ಥೆಯ ಮೂಲಕ ಹೆಚ್ಚಿನ ಅಭಿಮಾನಿಗಳನ್ನು ತಲುಪಲು ಈ ಒಪ್ಪಂದ ಸಹಾಯಕವಾಗಲಿದೆ.

ಇದಲ್ಲದೇ ಒಪ್ಪಂದದ ಭಾಗವಾಗಿ ಮ್ಯಾಂಚೆಸ್ಟರ್‌ ಸಿಟಿಯ OTT ಪ್ಲಾಟ್‌ಫಾರ್ಮ್ CITY+ ಅನ್ನು JioTV ಪ್ಲಾಟ್‌ಫಾರ್ಮ್‌ಗೆ ಸಂಯೋಜಿಸಲಾಗುತ್ತದೆ. ಇದರಿಂದ CITY+ ನಲ್ಲಿರುವ ಲೈಟ್ ಡೆವಲಪ್‌ಮೆಂಟ್ ಸ್ಕ್ವಾಡ್ ಫಿಕ್ಚರ್‌ಗಳು, ಮ್ಯಾಚ್‌ಡೇ ಕಂಟೆಂಟ್ ಮತ್ತು ಸಿಟಿ ಸ್ಟುಡಿಯೋಸ್ ಸಾಕ್ಷ್ಯಚಿತ್ರಗಳು ಸೇರಿದಂತೆ ಫುಟ್ಬಾಲ್‌ ಕ್ಲಬ್‌ ನ ಹಲವು ಕಂಟೆಂಟ್‌ ಗಳು ಭಾರತದಲ್ಲಿ ಹೆಚ್ಚಿನದಾಗಿ ತಲುಪಲು ಸಾಧ್ಯವಾಗುತ್ತದೆ. JioTV ಭಾರತದ ಪ್ರಮುಖ ಡಿಜಿಟಲ್ ವೀಡಿಯೊ ಪ್ಲಾಟ್‌ಫಾರ್ಮ್ ಆಗಿದ್ದು, ಬಳಕೆದಾರರಿಗೆ 12 ಪ್ರಕಾರಗಳಲ್ಲಿ 16 ಭಾಷೆಗಳಲ್ಲಿ 900 ಕ್ಕೂ ಹೆಚ್ಚು ಚಾನಲ್‌ಗಳ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತದೆ. ಇದು ಜಾಗತಿಕವಾಗಿ 350 ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿದ್ದು ಎರಡನೇ ಅತಿದೊಡ್ಡ OTT ಪ್ಲಾಟ್‌ಫಾರ್ಮ್ ಎಂದೆನಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!