ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರವಾರ ಜಿಲ್ಲೆ ಶಿರೂರಿನಲ್ಲಿ ಭೂಕುಸಿತ ಸಂಭವಿಸಿ 29 ದಿನಗಳು ಕಳೆದಿದ್ದು, ನಾಪತ್ತೆಯಾಗಿದ್ದ ಕೇರಳ ಚಾಲಕನ ಲಾರಿ ಭಾಗಗಳು ಪತ್ತೆಯಾಗಿವೆ.
ಕಾರವಾರ ಶಾಸಕ ಸತೀಶ್ ಸೈಲ್ ಸೂಚನೆ ಮೇರೆಗೆ ಇದೀಗ ಮತ್ತೆ ಶೋಧ ಕಾರ್ಯ ಆರಂಭವಾಗಿದ್ದು, ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಗಂಗಾವಳಿ ನದಿಯಲ್ಲಿ ಪರಿಶೀಲಿಸಿದಾಗ ಗ್ಯಾಸ್ ಟ್ಯಾಂಕರ್ನ ಸ್ವಲ್ಪ ಭಾಗ ಪತ್ತೆಯಾಗಿದೆ.
ಕೇರಳದ ಚಾಲಕ ಅರ್ಜುನ್ ಎಂಬಾತನಿಗೆ ಸೇರಿದ್ದ ಲಾರಿಯನ್ನು ಹೊರ ತೆಗೆಯಲಾಗಿತ್ತು. ಕೇರಳ ಮೂಲದ ಅರ್ಜುನ್, ಶಿರೂರಿನ ಜಗನ್ನಾಥ, ಗಂಗೆಕೊಳ್ಳದ ಲೋಕೇಶ್ ಅವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ, ಆದರೆ ಲಾರಿ ಭಾಗಗಳು ಪತ್ತೆಯಾಗಿರುವುದು ಶೋಧ ತಂಡಕ್ಕೆ ಹೊಸ ಭರವಸೆ ಮೂಡಿಸಿದೆ. ತಂಡವು ಗಂಗಾವಳಿ ನದಿಯ ಮಧ್ಯದಲ್ಲಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಲಿದೆ.