ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಲಕರು ತಮ್ಮ ಮಕ್ಕಳನ್ನು ಕಷ್ಟಪಟ್ಟು ಓದಿಸಿ ಬೆಳೆಸ್ತಾರೆ. ಅವರ ಕುಟುಂಬ ಮತ್ತು ಸಮುದಾಯಕ್ಕೆ ಹೆಸರು ತರಲಿ ಎಂದು ಹಾರೈಸುತ್ತಾರೆ. ಆದರೆ ಇಲ್ಲೊಬ್ಬ ಮಗ ತನ್ನ ವೃದ್ಧ ತಂದೆಯನ್ನು ಕಡಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ಆಸ್ತಿ ಬೇಕು ಎಂಬ ಕಾರಣಕ್ಕೆ ಮಗನೊಬ್ಬ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕೊರಗೆರೆ ತಾಲೂಕಿನ ಅಳವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಗ ಸಿದ್ದಪ್ಪ ತನ್ನ 75 ವರ್ಷದ ತಂದೆ ವೆಂಕಟಪ್ಪನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇತ್ತೀಚೆಗಷ್ಟೇ ವೆಂಕಟಪ್ಪ ಜಮೀನು ಮಾರಿ ಮಗಳಿಗೆ 25 ಲಕ್ಷ ಕೊಟ್ಟಿದ್ದಕ್ಕೆ ಸಿಟ್ಟಿಗೆದ್ದ ಸಿದ್ದಪ್ಪ ತಂದೆಯೊಂದಿಗೆ ಜಗಳವಾಡಿದ್ದ. ತಂದೆ ಮಗನ ಜಗಳ ತಾರಕಕ್ಕೇರಿತ್ತು. ಅದೇ ಸಿಟ್ಟಿನಲ್ಲಿ ಸಿದ್ದಪ್ಪ ತಂದೆಗೆ ಮಚ್ಚಿನಿಂದ ಹೊಡೆದು ಓಡಿ ಹೋಗಿದ್ದಾನೆ.
ಕೊಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.