ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಿಂದ ವಾಪಸಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ, ಜೆಪಿಸಿಯ ಸದಸ್ಯರಾಗಲೀ, ಪಕ್ಷದ ಮುಖಂಡರಾಗಲೀ ವಕ್ಫ್ ವಿರುದ್ಧದ ಹೋರಾಟ ಕೈಬಿಡುವಂತೆ ಹೇಳಿಲ್ಲ, ತಾವು ಹೋರಾಟ ಮಾಡಿ ನೀಡಿದ ವರದಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಬಹಳಷ್ಟು ನೆರವಾಗಲಿದೆ ಅಂತ ಜಗದಂಬಿಕಾ ಪಾಲ್ ಹೇಳಿದ್ದಾರೆ ಎಂದರು.
ತಮ್ಮ ಹೋರಾಟ ಕೊನೆಗೊಳ್ಳುವವರೆಗೆ ಮತ್ತು ವಕ್ಫ್ ಕಾಯಿದೆಯಲ್ಲಿ ಬದಲಾವಣೆ ಮಾಡುವವರೆಗೆ ವಕ್ಫ್‌ನ ತಟಸ್ಥತೆಯನ್ನು ಕಾಪಾಡಿಕೊಳ್ಳಲು ನಿರ್ದೇಶನ ನೀಡುವಂತೆ ಕೇಂದ್ರವನ್ನು ಕೋರಿದ್ದೇವೆ ಎಂದು ಅವರು ಹೇಳಿದರು.