ಪಕ್ಷ ನಮ್ಮ ತಾಯಿ ಇದ್ದಂಗೆ: ಜೆಡಿಎಸ್​ ಬಿಟ್ಟು ಹೋಗದಂತೆ ಶಾಸಕರು, ನಾಯಕರುಗಳಿಗೆ ಪ್ರತಿಜ್ಞಾವಿಧಿ ಬೋಧನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲೋಕಸಭೆ ಚುನಾವಣೆಗೆಬಿಜೆಪಿ ಜೊತೆಗೆ ಮೈತ್ರಿಯಾಗಿದ್ದಕ್ಕೆ ಜೆಡಿಎಸ್​ನಲ್ಲಿ ಕಲಹ ಸೃಷ್ಟಿಸಿದೆ. ಇಷ್ಟು ದಿನ ದಳಮನೆಯಲ್ಲಿದ್ದ ಮುಸ್ಲಿಂ ಮುಖಂಡರು ತೆನೆ ಇಳಿಸಿ ಹೊರಡಲು ನಿರ್ಧರಿಸಿದ್ದಾರೆ.

ಈ ಹಿನ್ನೆಲೆ ಇಂದು ಜೆಡಿಎಸ್ ವರಿಷ್ಠರು ಅಸಮಧಾನಿತ ನಾಯಕರ ಸಭೆ ಕರೆದು ಮನವೊಲಿಸು ಕಸರತ್ತು ಮಾಡಿದ್ದು, ಪಕ್ಷ ಬಿಟ್ಟು ಹೋಗದಂತೆ ಪ್ರತಿಜ್ಞೆ ಭೋದನೆ ಮಾಡಲಾಗಿದೆ.

ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಅಸಮಧಾನಿತ ನಾಯಕರ ಸಭೆ ನಡೆಯಿತು. ಈ ಸಭೆಯಲ್ಲಿ ಮೈತ್ರಿಗೆ ಅಸಮಧಾನಗೊಂಡಿರುವ ನಾಯಕರ ಮುನಿಸು ಶಮನಕ್ಕೆ ಕಸರತ್ತು ನಡೆಸಿದ್ದಾರೆ.

ಮುನಿಸಿಕೊಂಡಿದ್ದ ಶಾಸಕರಾದ ಶರಣಗೌಡ ಕಂದಕೂರು ಹಾಗೂ ಕರೆಮ್ಮ ನಾಯಕ ಸೇರಿದಂತೆ ಇತರೆ ನಾಯಕರ ಜೊತೆ ಕುಮಾರಸ್ವಾಮಿ ಸೇರಿದಂತೆ ಇತರೆ ನಾಯಕರು ಮಾತುಕತೆ ಮಾಡಿದ್ದು, ಯಾವುದೇ ಕಾರಣಕ್ಕೆ ಪಕ್ಷ ತೊರೆದಂತೆ ಮನವಿ ಮಾಡಿದ್ದಾರೆ. ಅಲ್ಲದೇ ಸಭೆಯ ಕೊನೆಯಲ್ಲಿ ಜೆಡಿಎಸ್​ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಅವರು ಜೆಡಿಎಸ್‌ ಬಿಟ್ಟು ಹೋಗದಂತೆ ಶಾಸಕರಿಗೆ ಹಾಗೂ ನಾಯಕರಿಗೆ ಪ್ರತಿಜ್ಞೆ ಭೋದನೆ ಮಾಡಿದ್ದಾರೆ.

ಪಕ್ಷ ನಮ್ಮ ತಾಯಿ ಇದ್ದಂಗೆ, ಪಕ್ಷದ‌ ಪರವಾಗಿ ವಿಧೇಯರಾಗಿರುತ್ತೇವೆ. ಪಕ್ಷ ಪರವಾಗಿ ಕೆಲಸ ಮಾಡುತ್ತೇವೆ. ಪಕ್ಷದ ತೀರ್ಮಾನ ವೇ ಅಂತಿಮ ತೀರ್ಮಾನ. ಪಕ್ಷದ ತೀರ್ಮಾನಕ್ಕೆ ವಿಧೇಯರಾಗಿರುತ್ತೇವೆ ಎಂದು ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ಆದ್ರೆ, ಅಸಮಾಧಾನಿತರು ಪ್ರತಿಜ್ಞಾವಿಧಿಗೆ ಬದ್ಧರಾಗಿರುತ್ತಾರಾ ಎನ್ನುವುದೇ ಕುತೂಹಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!