ಹೊಸದಿಗಂತ ವರದಿ,ಕಲಬುರಗಿ:
ಸಾಮಾನ್ಯ ಕಾಯ೯ಕತ೯ರನ್ನು ಗುರುತಿಸಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಏಕೈಕ ಪಕ್ಷ ದೇಶದಲ್ಲಿ ಇದ್ದರೆ,ಅದು ಬಿಜೆಪಿ ಪಕ್ಷ. ಹೀಗಾಗಿ ಪಕ್ಷದ ಕಾಯ೯ಕತ೯ರೆ ನಮ್ಮ ಮಾಲೀಕರು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅಭಿಮತ ವ್ಯಕ್ತಪಡಿಸಿದರು.
ಬುಧವಾರ ಜಿಲ್ಲೆಯ ಜೇವರ್ಗಿ ತಾಲೂಕಿನ ಶಕ್ತಿ ಕೇಂದ್ರದ ಪ್ರಮುಖ ಕಾಯ೯ಕತ೯ರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಕೇವಲ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾತ್ರ ಯಜಮಾನರು.ಆದರೆ ನಮ್ಮ ಪಕ್ಷದ ಕಾಯ೯ಕತ೯ರೆ ನಮ್ಮ ಜೀವಾಳ ಎಂದರು.
ಕಾಂಗ್ರೆಸ್ ಪಕ್ಷ ಯಾವ ಉದ್ದೆಶದಿಂದ ಭಾರತ ಜೋಡೋ ಅಭಿಯಾನ ಹಮ್ಮಿಕೊಂಡಿದೆ ತಿಳಿಯದ ಸಂಗತಿ, ಆದರೆ ಕಾಂಗ್ರೆಸ್ ಪಕ್ಷದ ನಾಯಕರೇ ತಿಳಿದುಕೊಳ್ಳಿ,ಭಾರತ ಆಧ್ಯಾತ್ಮಿಕವಾಗಿ, ಧಾಮಿ೯ಕವಾಗಿ ಯಾವತ್ತೂ ಒಗ್ಗಾಟಾಗಿದೆ.ಕಾಂಗ್ರೆಸ್ ಪಕ್ಷ ತಮ್ಮ ಪಕ್ಷವನ್ನು ಜೋಡಿಸುವ ಅಭಿಯಾನ ಮಾಡಬೇಕು ಎಂದರು.
ಮೋದಿ-ಯೋಗಿ ಆಡಳಿತದಿಂದ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅದೇ ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಒಳ್ಳೆಯ ಆಡಳಿತ ನೀಡಿದ್ದು,ಮುಂಬರುವ ಚುನಾವಣೆಯಲ್ಲಿ 150ಕ್ಕಿಂತ ಅಧಿಕ ಸ್ಥಾನ ಬಿಜೆಪಿ ಗೆಲ್ಲಲಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕೈಗಳಿಗೆ ಬಾಕ್ತಿಂಗ್ ಗ್ಲಬ್ಸ್ ಹಾಕಿಕೊಂಡು ಜಗಳವಾಡುವ ಕಾಲ ಬರುತ್ತದೆ ಕಾದು ನೋಡಿ ಎಂದ ಅವರು,ದೇಶದ ಅಭಿವೃದ್ಧಿ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಡಬಲ್ ಇಂಜಿನ್ ಸಕಾ೯ರವನ್ನು ಗೆಲ್ಲಿಸುವ ಪಣವನ್ನು ಪ್ರತಿ ಬೂತ್,ನ ಕಾಯ೯ಕತ೯ ಸಂಕಲ್ಪ ತೊಡಬೇಕಾಗಿದೆ ಎಂದರು.
ಸಂಸದ ಉಮೇಶ್ ಜಾಧವ,ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ದೊಡ್ಡಪ್ಪಗೌಡ ಪಾಟೀಲ್ ಮಾತನಾಡಿದರು.