ಭಾರತಮಾಲಾ, ಸಾಗರಮಾಲಾ ಆಯ್ತು- ಇದೀಗ ಪರ್ವತಮಾಲಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಈ ಬಾರಿಯ ಬಜೆಟ್ ನಲ್ಲಿ ಸಹ ರಸ್ತೆ ನಿರ್ಮಾಣ, ಹೆದ್ದಾರಿ ನಿರ್ಮಾಣಗಳಿಗೆ ಅತಿ ಹೆಚ್ಚಿನ ಗಮನವನ್ನು ನೀಡಲಾಗಿದೆ.

ಬಜೆಟ್ 2022ರ ಪ್ರಾರಂಭದಲ್ಲೇ ಪ್ರಧಾನಿ ಗತಿಶಕ್ತಿ ಯೋಜನೆ ಹಾಗೂ ಅದರ ಮೂಲಕ ಮೂಲಸೌಕರ್ಯ ವಿಸ್ತರಿಸುವ ಬಗ್ಗೆ ಮಾತನಾಡಿದ ವಿತ್ತ ಸಚಿವರು, ರಾಷ್ಟ್ರೀಯ ಹೆದ್ದಾರಿಯನ್ನು 2022-23ರಲ್ಲಿ 25,00 ಕಿ.ಮೀಗೆ ವಿಸ್ತರಿಸಲಾಗುವುದು ಎಂದರು.

ದೇಶದ ಪರ್ವತ, ಗುಡ್ಡಗಾಡು ಪ್ರದೇಶಗಳಿಗೆ ರೋಪ್ ವೆ ಉಪಯೋಗಿಸಿಕೊಂಡು ಸಂಪರ್ಕ ಕಲ್ಪಿಸುವ ಪರ್ವತಮಾಲಾ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು. 2022-23ರಲ್ಲಿ ಇಂಥ 8 ಯೋಜನೆಗಳನ್ನು ಕೈಗೊಳ್ಳುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!