ಸ್ವಚ್ಛವಾಗಿ ಮೇಂಟೇನ್‌ ಮಾಡ್ತಿರೋ ಮೆಟ್ರೋ ನಿಲ್ದಾಣದಲ್ಲಿ ಉಗುಳಿದ ಪ್ರಯಾಣಿಕನಿಗೆ ದಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೆಟ್ರೊ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ ಬಿಎಮ್‌ಆರ್‌ಸಿಎಲ್ ದಂಡ ವಿಧಿಸಿದೆ.‌

ಮೇ 2 2025ರ ಸಂಜೆ ಸುಮಾರು 6:30ಕ್ಕೆ ಗ್ರೀನ್ ಲೈನ್‌ ಕನಕಪುರ ರಸ್ತೆಯಲ್ಲಿರುವ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದ ಪ್ಲಾಟ್ ಫಾರ್ಮ್ 01ರ ಲಿಫ್ಟ್ ಬಳಿಯಲ್ಲಿ ಪಾನ್ ಮಸಾಲಾ ಉಗುಳುತ್ತಿದ್ದ ಪ್ರಯಾಣಿಕನನ್ನು ಪತ್ತೆ ಹಚ್ಚಿ ಮೆಟ್ರೋ ಅಧಿಕಾರಿಗಳು ದಂಡ ವಿಧಿಸಿರುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.

ಮೆಟ್ರೋ ಆವರಣದಲ್ಲಿ ಉಗುಳುವುದು ಮತ್ತು ಕಸದಂಚುಗಳನ್ನು ಎಸೆಯುವುದು ಪರಿಸರ ಹಾಳಾಗುವುದಲ್ಲದೆ, ಇತರೆ ಪ್ರಯಾಣಿಕರ ಆರೋಗ್ಯಕ್ಕೂ ಅಪಾಯವನ್ನು ಉಂಟುಮಾಡುತ್ತದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸ್ವಚ್ಛ, ಆರೋಗ್ಯಕರ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಾಗಿ ಕಟಿಬದ್ಧವಾಗಿದೆ. ಸ್ವಚ್ಛತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಪ್ರಯಾಣಿಕರು ಸಹಕರಿಸಿ, ಇಂತಹ ಘಟನೆಗಳು ಸಂಭವಿಸಿದರೆ ತಕ್ಷಣವೇ ಮೆಟ್ರೋ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಬಿಎಂಆರ್​​ಸಿಎಲ್​ ಮನವಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!