ಪ್ರಯಾಣಿಕರೇ ಗಮನಿಸಿ…ನಾಳೆ 6 ಗಂಟೆ ಕಾಲ ಮುಂಬೈ ವಿಮಾನ ನಿಲ್ದಾಣ ಕ್ಲೋಸ್, ಹಾರಾಟ ಬಂದ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ವಹಣಾ ಕಾರ್ಯ ಇರುವ ಹಿನ್ನೆಲೆ (ಅಕ್ಟೋಬರ್ 18) ಮಂಗಳವಾರ ಆರು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುವುದು.

ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ರನ್ವೇಯನ್ನು ಮುಚ್ಚಲಾಗುವುದು ಎಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (MIAL) ಅಧಿಕಾರಿಗಳು ತಿಳಿಸಿದ್ದಾರೆ.

ರನ್ವೇ 14/32 ಗಾಗಿ ಎಡ್ಜ್ ಲೈಟ್ಗಳ ದುರಸ್ತಿ, ಎಜಿಎಲ್ (ಏರೋನಾಟಿಕಲ್ ಗ್ರೌಂಡ್ ಲೈಟ್ಸ್) ನವೀಕರಣದಂತಹ ಪ್ರಮುಖ ಕೆಲಸಗಳನ್ನು ನಡೆಯಲು ಇರುವ ಕಾರಣ ನಾಳೆ ಆರು ಗಂಟೆಗಳ ಕಾಲ ಸ್ಥಗಿತಗೊಳ್ಳಲಿದೆ ಎಂದು ಎಂಐಎಎಲ್ ತಿಳಿಸಿದೆ.

ಆದಾಗ್ಯೂ, ಸಿಎಸ್‌ಎಂಐಎ ಎಲ್ಲಾ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆಗಳನ್ನ ತಪ್ಪಿಸಲು ಅಕ್ಟೋಬರ್ 18ರ ವಿಮಾನ ವೇಳಾಪಟ್ಟಿಯನ್ನು ಆಯಾ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸುವಂತೆ ಸಲಹೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!