ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಲೇ ಇದೆ. ಇದರಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ಮೆಟ್ರೋ ರೈಲಿನ ಮೊರೆ ಹೋಗುತ್ತಿದ್ದಾರೆ. ಬಸ್‌ನಲ್ಲಿ ಸೆಕೆ, ಕುಳಿತುಕೊಳ್ಳೋಕೆ ಸೀಟ್ ಇಲ್ಲದೆ ಪರದಾಟ ಇನ್ನಿತರ ಸಮಸ್ಯೆಗಳಿಂದ ಮೆಟ್ರೋ ಕಡೆ ಜನ ಮುಖ ಮಾಡಿದ್ದಾರೆ. ಆದರೆ ಇದನ್ನರಿತ ಬಿಎಂಟಿಸಿ ಹೊಸ ಬಸ್‌ನ್ನು ರೋಡಿಗಿಳಿಸಿದೆ.
ಬಿಎಂಟಿಸಿ 320 ಹೊಚ್ಚ ಹೊಸ ಎಸಿ ಬಸ್ಗಳ ಮೊರೆ ಹೋಗಿದೆ. ಈಗಾಗಲೇ ಎಸಿ ಎಲೆಕ್ಟ್ರಿಕ್ ಬಸ್ಗಳ ಪ್ರಾಯೋಗಿಕ ಸಂಚಾರ ಯಶಸ್ವಿಯೂ ಆಗಿದೆ. ಸದ್ಯದಲ್ಲೇ ಈ ಎಲ್ಲಾ ಬಸ್ಗಳಿಗೆ ಸಿಎಂ, ಡಿಸಿಎಂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಲಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣ, ಮೆಜೆಸ್ಟಿಕ್, ಕತ್ರಿಗುಪ್ಪೆ, ಐಟಿಪಿಎಲ್, ಎಚ್ಎಸ್ಆರ್ ಲೇಔಟ್ ಡಿಪೋದಿಂದ ಬಸ್ ಕಾರ್ಯಾಚರಣೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ವಾಯುವಜ್ರ ಬಸ್ ನಿಲ್ಲಿಸಿ, ಈ ಎಸಿ ಎಲೆಕ್ಟ್ರಿಕ್ ಬಸ್ಗಳನ್ನು 900 ಟ್ರಿಪ್ಗಳಲ್ಲಿ ಬಸ್ ಓಡಿಸಲು ಬಿಎಂಟಿಸಿ ಯೋಜನೆ ರೂಪಿಸುತ್ತಿದೆ.