ಗಡಿ ವಿವಾದದಿಂದಾಗಿ ಮಹಾರಾಷ್ಟ್ರ-ಕರ್ನಾಟಕ ಬಸ್ ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಹಾರಾಷ್ಟ್ರದ ಕೆಲವು ಪ್ರದೇಶಗಳು ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಸಿದ್ಧವಾಗಿವೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆ ಬಳಿಕ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಗಡಿಯ ಎರಡೂ ಕಡೆಗಳಲ್ಲಿ ಆಕ್ರಮಣಕಾರಿ ಪ್ರತಿಕ್ರಿಯೆಗಳು ಭುಗಿಲೆದ್ದಿವೆ.
ರಾಜ್ಯ ಸಾರಿಗೆ ಬಸ್‌ಗಳು ರಾಜಕೀಯ ಸಂಘಟನೆಗಳ ಸಾಫ್ಟ್ ಟಾರ್ಗೆಟ್ ಆಗಿರುವುದರಿಂದ, ರಾಜ್ಯಗಳ ಸಾರಿಗೆ ನಿಗಮಗಳು ತಮ್ಮ ಬಸ್‌ಗಳನ್ನು ಮತ್ತೊಂದು ರಾಜ್ಯಕ್ಕೆ ಪ್ರವೇಶಿಸದಂತೆ ಕೆಲವೊಮ್ಮೆ ನಿಲ್ಲಿಸಬೇಕಾಯಿತು ಸ್ಥಿತಿ ನಿರ್ಮಾಣವಾಗಿದೆ.  ಮಹಾರಾಷ್ಟ್ರದಲ್ಲಿ ಸೊಲ್ಲಾಪುರ ಮತ್ತು ಸಾಂಗ್ಲಿಯಿಂದ ಕರ್ನಾಟಕದ ಕಡೆಗೆ ಸಂಚರಿಸುವ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ರಾಜ್ಯದ ಗಡಿಯಲ್ಲಿ ಸಂಚರಿಸಬೇಕಾದ ಪ್ರಯಾಣಿಕರು ಬಸ್ ಗಳ ಅಲಭ್ಯತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಕರ್ನಾಟಕದ ಸಂಕೇಶ್ವರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಲ್ಲಾಪುರದ ಕಾಲೇಜು ಪ್ರಾಧ್ಯಾಪಕ ಸಚಿನ್ ಗುರವ್ ಮಾತನಾಡಿ, ಪ್ರತಿ ಬಾರಿ ಗಡಿ ವಿವಾದ ಉಲ್ಬಣಗೊಂಡಾಗ ಬಸ್ ಸಂಚಾರಕ್ಕೆ ತೊಂದರೆಯಾಗುತ್ತದೆ, ಪ್ರತಿದಿನ ಗಡಿ ದಾಟಬೇಕಾದ ನನ್ನಂತಹ ಜನರು ತೊಂದರೆ ಅನುಭವಿಸುತ್ತಾರೆ. ಇಂತಹ ಸಮಸ್ಯೆಯನ್ನು ಈಗಲೇ ಬಗೆಹರಿಸಬೇಕು. ಶನಿವಾರ ಬಸ್ಸುಗಳು ಓಡಾಡದ ಕಾರಣ ನನ್ನ ಬೈಕ್‌ನಲ್ಲಿ ಕರ್ನಾಟಕದ ಸಂಕೇಶ್ವರಕ್ಕೆ ಹೋಗಬೇಕಾಯಿತು ಎಂದು ಹೇಳಿದ್ದಾರೆ.
ಶುಕ್ರವಾರ ಸಂಜೆ, ಶಿವಸೇನೆಯ ಉದ್ಧವ್ ಠಾಕ್ರೆ ಗುಂಪಿನ ಬೆಂಬಲಿಗರು ಕೊಲ್ಲಾಪುರದಲ್ಲಿ ಕರ್ನಾಟಕ ರಾಜ್ಯದ ಬಸ್‌ಗಳಿಗೆ ಕಪ್ಪು ಶಾಯಿಯಿಂದ ವಿರೂಪಗೊಳಿಸಿ ‘ಜೈ ಮಹಾರಾಷ್ಟ್ರ’ ಘೋಷಣೆಗಳನ್ನು ಬರೆದಿದ್ದರು. ಸಾಂಗ್ಲಿ ಜಿಲ್ಲೆಯ ಮ್ಹೈಶಾಲ್ ಗ್ರಾಮದ ಬಳಿ ಅಥಣಿ-ಪುಣೆ ಮಾರ್ಗದಲ್ಲಿ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬರು ಕಲ್ಲು ಎಸೆದು ಕರ್ನಾಟಕ ರಾಜ್ಯ ಬಸ್ ಒಂದರ (ಕೆಎ 23-ಎಫ್-1004) ಕಿಟಕಿಯ ಗಾಜನ್ನು ಒಡೆದಿದ್ದಾರೆ. ಪುಣೆಯ ದೌಂಡ್ ತಹಸಿಲ್‌ನಲ್ಲಿ, ಮರಾಠ ಮಹಾಸಂಘದ ಸದಸ್ಯರು ಕರ್ನಾಟಕ ಸಾರಿಗೆಯ ನಿಪಾನಿ-ಔರಂಗಾಬಾದ್ ಬಸ್‌ಗೆ ಕಪ್ಪು ಮಸಿ ಎಸೆದರು.
ಕರ್ನಾಟಕದ ಗಡಿ ಭಾಗದಲ್ಲೂ ಅದಕ್ಕೆ ಅನುಗುಣವಾದ ಕ್ರಮಗಳು ಕಂಡುಬಂದವು. ಶುಕ್ರವಾರ ರಾತ್ರಿ ಅಕ್ಕಲಕೋಟ-ಅಫಜಲಪುರ ಮಾರ್ಗವಾಗಿ ಸಂಚರಿಸುವ ಮಹಾರಾಷ್ಟ್ರ ಸಾರಿಗೆ ಬಸ್‌ಗೆ ಕರ್ನಾಟಕ ನವನಿರ್ಮಾಣ ಸೇನೆಯ ಸದಸ್ಯರು ಕಪ್ಪು ಮಸಿ ಎಸೆದಿದ್ದಾರೆ.
ಮೀರಜ್, ಸಾಂಗ್ಲಿ ಮತ್ತು ಸೊಲ್ಲಾಪುರ ಡಿಪೋದಿಂದ ಅಥಣಿ, ಕಾಗವಾಡ ಮತ್ತು ಗುಲ್ಬರ್ಗಾ ಕಡೆಗೆ ಹೋಗುತ್ತಿದ್ದ ಮಹಾರಾಷ್ಟ್ರ ಎಸ್‌ಟಿ ಬಸ್‌ಗಳನ್ನು ಶನಿವಾರ ಕಾಗವಾಡ ಬಳಿ ಕರ್ನಾಟಕ ಪೊಲೀಸರು ತಡೆದರು. ಬಸ್ಸುಗಳು ಕರ್ನಾಟಕ ಪ್ರವೇಶಿಸಲು ಬಿಡಲಿಲ್ಲ.
ಬಸ್‌ಗಳ ಮೇಲಿನ ಈ ದಾಳಿಯ ನಂತರ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (MSRTC) ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಗಳು ಪ್ರಸ್ತುತ ನಡೆಯುತ್ತಿರುವ ಆಂದೋಲನ ಮತ್ತು ಪ್ರತಿಭಟನೆಗಳನ್ನು ನಿರ್ಣಯಿಸಿದ ನಂತರವೇ ಬಸ್‌ಗಳನ್ನು ಕಳುಹಿಸುತ್ತಿವೆ. ಎಂಎಸ್‌ಆರ್‌ಟಿಸಿ ವಿಭಾಗೀಯ ಸಂಚಾರ ನಿಯಂತ್ರಕ ಶಿವರಾಜ್ ಜಾಧವ್ ಈ ಬಗ್ಗೆ ಪ್ರತಿಕ್ರಿಯಿಸಿ “ಸುಮಾರು 70% ಬಸ್‌ಗಳು ಸೇವೆಯನ್ನು ಪುನರಾರಂಭಿಸಲಾಗಿದ್ದು, ಕರ್ನಾಟಕದ ಕಡೆಗೆ ಚಲಿಸುತ್ತಿವೆ. ಯಾವುದೇ ಆಂದೋಲನ, ಅಥವಾ ಪರಿಸ್ಥಿತಿ ಹದಗೆಟ್ಟರೆ, ಪೊಲೀಸ್ ಮತ್ತು ಗಡಿಯಾಚೆಗಿನ ಬಸ್ ಡಿಪೋಗಳು ನಮಗೆ ತಿಳಿಸುತ್ತವೆ. ಈ ವೇಳೆ ನಮ್ಮ ಬಸ್‌ ಸೇವೆಯನ್ನು ನಿಲ್ಲಿಸುತ್ತೇವೆ. ಶುಕ್ರವಾರ, ಬಸ್ ಸೇವೆಗಳು ಲ್ಲಿ ವ್ಯತ್ಯಯವಾಗಿತ್ತು. ಶನಿವಾರ ಮಧ್ಯಾಹ್ನದಿಂದ, ಕೊಲ್ಹಾಪುರದಿಂದ ಮತ್ತು ಕೊಲ್ಹಾಪುರಕ್ಕೆ ಸೇವೆಗಳು ಪುನರಾರಂಭಗೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!