ಪ್ರಯಾಣಿಕರೇ ಗಮನಿಸಿ…ಇನ್ಮುಂದೆ ರೈಲ್ವೆ ಪ್ರಯಾಣದ ವೇಳೆ ಹೆಚ್ಚು ಲಗೇಜ್ ಕೊಂಡೊಯ್ಯದ್ರೆ ಬೀಳುತ್ತೆ ದಂಡ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತೀಯ ರೈಲ್ವೆಯು ಲಗೇಜ್ ಗಳಿಗೆ ಹೊಸ ನಿಯಮಗಳನ್ನು ಘೋಷಿಸಿದ್ದು, ಇದರ ಪರಿಣಾಮವಾಗಿ ರೈಲು ಪ್ರಯಾಣಿಕರು ತಮ್ಮ ಸಾಮಾನು ಸಾಗಿಸುವ ವೇಳೆ ಮಿತಿಗೊಳಿಸಬಕು, ಇಲ್ಲವೇ ಪ್ರಯಾಣದ ಸಮಯದಲ್ಲಿ ಹೆಚ್ಚುವರಿ ಲಗೇಜ್ ಸಾಗಿಸಲು ಹೆಚ್ಚು ಪಾವತಿಸಬೇಕಾಗುತ್ತದೆ.

ಹೊಸ ನಿಯಮಗಳ ಪ್ರಕಾರ, ಪ್ರಯಾಣಿಕರು ರೈಲ್ವೆ ನಿಗದಿಪಡಿಸಿದ ಮಾನದಂಡಕ್ಕಿಂತ ಹೆಚ್ಚಿನ ತೂಕದ ಸರಕುಗಳನ್ನ ಸಾಗಿಸಲು ಬಯಸಿದರೆ ಈಗ ಹೆಚ್ಚುವರಿ ಪಾವತಿಸಬೇಕಾಗುತ್ತದೆ.

ರೈಲ್ವೆ ಸಚಿವಾಲಯವು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ‘ರೈಲು ಪ್ರಯಾಣದ ಸಮಯದಲ್ಲಿ ಹೆಚ್ಚಿನ ಸಾಮಾನುಗಳನ್ನ ಒಯ್ಯಬೇಡಿ. ತೆಗೆದುಕೊಂಡು ಹೋದ್ರೆ, ಅದನ್ನ ಲಗೇಜ್ ವ್ಯಾನ್ʼನಲ್ಲಿ ಕಾಯ್ದಿರಿಸಿ. ಸಾಮಾನು ಹೆಚ್ಚಿದ್ದರೆ, ಪ್ರಯಾಣದ ಖುಷಿ ಅರ್ಧದಷ್ಟು ಕಡಿಮೆಯಾಗುತ್ತದೆ’ (sic)’ ಎಂದಿದೆ.

ರೈಲ್ವೆಯು ಪ್ರತಿ ಬೋಗಿಗೆ ಅನುಗುಣವಾಗಿ ಲಗೇಜ್ʼಗಳ ಮೇಲೆ ಮಿತಿಯನ್ನು ನಿಗದಿಪಡಿಸಿದೆ, ಇದರಿಂದಾಗಿ 40 ಕೆಜಿಯಿಂದ 70 ಕೆಜಿವರೆಗಿನ ಭಾರದ ಸರಕುಗಳನ್ನ ರೈಲು ಬೋಗಿಯಲ್ಲಿ ಇಡಬಹುದು. ಹೊಸ ನಿಯಮಗಳ ಪ್ರಕಾರ, ಸ್ಲೀಪರ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಹೆಚ್ಚುವರಿ ಪಾವತಿಸದೆ 40 ಕೆಜಿಯವರೆಗೆ ಲಗೇಜ್‌ಗಳನ್ನ ಸಾಗಿಸಬಹುದು. ಅದೇ ರೀತಿ, ಎಸಿ ಟು ಟೈರ್ʼನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಥಮ ದರ್ಜೆ ಎಸಿಯಲ್ಲಿ ಗರಿಷ್ಠ 70 ಕೆಜಿ ತೂಕದ 50 ಕೆಜಿ ತೂಕದ ಲಗೇಜ್ʼಗಳನ್ನು ಸಾಗಿಸಲು ಅವಕಾಶವಿದೆ. ಹೆಚ್ಚುವರಿ ಪಾವತಿಸುವ ಮೂಲಕ ಈ ಮಿತಿಯನ್ನು 80 ಕೆಜಿವರೆಗೆ ಹೆಚ್ಚಿಸಬಹುದು.

ಪ್ರಯಾಣದ ಸಮಯದಲ್ಲಿ, ಯಾವುದೇ ಪ್ರಯಾಣಿಕನು ನಿಗದಿತ ಮಾನದಂಡಕ್ಕಿಂತ ಹೆಚ್ಚಿನ ತೂಕವನ್ನು ಹೊಂದಿರುವುದು ಕಂಡುಬಂದರೆ, ಆಗ ಅವನಿಗೆ / ಅವಳಿಗೆ ಹೆಚ್ಚುವರಿ ಶುಲ್ಕವನ್ನ ವಿಧಿಸಲಾಗುತ್ತದೆ. ಅದೇ ಪ್ರಯಾಣಿಕರು 109ರೂ.ಗಳನ್ನು ಪಾವತಿಸುವ ಮೂಲಕ ಲಗೇಜ್ ವ್ಯಾನ್ ಕಾಯ್ದಿರಿಸಬಹುದು.

ಪ್ರಯಾಣಿಕರು ಯಾವುದೇ ರೀತಿಯರಾಸಾಯನಿಕ, ಆಮ್ಲ, ಪಟಾಕಿಗಳು, ತುಪ್ಪ, ಚರ್ಮ, ತೈಲ, ಗ್ರೀಸ್ ನಂತಹ ನಿಷೇಧಿತ ವಸ್ತುಗಳನ್ನು ಒಯ್ಯಲು ಅನುಮತಿಸಲಾಗುವುದಿಲ್ಲ. ಯಾವುದೇ ಪ್ರಯಾಣಿಕರು ನಿಯಮಗಳನ್ನು ಉಲ್ಲಂಘಿಸಿದರೆ, ಅವರ ವಿರುದ್ಧ ರೈಲ್ವೆ ಕಾಯ್ದೆಯ ಸೆಕ್ಷನ್ 164ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!